"ಹೀಗೊಂದು ಪತ್ರ"
"ಹೀಗೊಂದು ಪತ್ರ"
ಕಿತ್ತೊಗೆದ ಕರುಳ ಕುಡಿಯ ಕರುಣಾಜನಕ ಕಥೆ...!!!
ಕ್ಷೇಮ ಶ್ರೀ ದಿನಾಂಕ: 31/03/19
ಪ್ರೀತಿಯ ಅಪ್ಪ, ಅಮ್ಮನಿಗೆ..
ಉಭಯ ಕುಶಲೋಪರಿ ಸಾಂಪ್ರದಾ. ನಾನಿಲ್ಲಿ ಕ್ಷೇಮ , ಒಂದು ರೀತಿಯಲಿ ಹೇಳಬೇಕೆಂದರೆ ಅಲ್ಲಿಗಿಂತಲೂ ಕ್ಷೇಮ. ನೀವೂ ಕ್ಷೇಮವೆಂದು ಭಾವಿಸುತ್ತೇನೆ. ನಿಮ್ಮ ಕ್ಷೇಮ, ಸಮಾಚಾರಗಳಿಗೆ ಪತ್ರ ಬರೆಯಿರಿ ಎನ್ನಲು ನನ್ನ ವಿಳಾಸಕ್ಕೆ ಪತ್ರ ತಲುಪಿಸಲು ಯಾವೊಂದು ಅಂಚೆ ಕಛೇರಿಯೂ ಇಲ್ಲವೆಂದು, ನಿಮಗೂ ತಿಳಿದಿದೆಯೆಂದು ಭಾವಿಸುತ್ತೇನೆ.
ಬಹುಶಃ ನನಗೆ ತಿಳಿದ ಮಟ್ಟಿಗೆ, ನನ್ನಷ್ಟು ಚಿಕ್ಕ ವಯಸ್ಸಿಗೇ ಪತ್ರ ಬರೆಯುವ ಬುದ್ದಿ ಮತ್ತು ಕೌಶಲ್ಯ ಯಾವ ಮಗುವಿಗೂ ಇದ್ದಿರಲಿಕ್ಕಿಲ್ಲ. ಆದರೇ ಅದರಿಂದ ಆದ ಪ್ರಯೋಜನ? "ಇಷ್ಟು ಚಿಕ್ಕ ವಯಸ್ಸಿಗೇ ಅಸಮಾನ್ಯ ಶಕ್ತಿ, ಹೇಗೆ? ಈ ಮಗುವಿನ ಹಿಂದಿನ ಜನ್ಮ ರಹಸ್ಯವಾದರೂ ಏನು ? ಇಲ್ಲಾ ಇದು ದೇವರ ಪವಾಡವೆನು ? ನೋಡಿ 'ಅಸಮಾನ್ಯ ಪವಾಡ' " ಎಂದು ವಾರ್ತಾ ವಾಹಿನಿಗಳಲ್ಲಿ ಸುದ್ದಿ ಪ್ರಕಟಿಸುವಂತೆ ಮಾಡಲು, ಅವರ TRPಗೆ ಕಾರಣವಾಗಲು, ನೀವಿಬ್ಬರು ಇಂದು ಒಟ್ಟಿಗೇ ಇದ್ದರಲ್ಲವೇ ?
ಅಪ್ಪಾ..., ಅಮ್ಮನ ಮೊದಲ ನಗೆಗೆ ಅವಳ ಹಿಂದೆ ಹೋಗಿ ಬಿಡದೇ ಅವಳನ್ನ ಹಿಂಬಾಲಿಸಿ, ಕೊನೆಗೂ ಗುಳಿ ಕೆನ್ನೆಯ ಚೆಲುವೆಯನ್ನು ಒಲಿಸಿಕೊಂಡವರು ನೀವಾದರೇ. ನಿಮ್ಮ ಚೆಲುವಿಗೆ, ಗತ್ತಿಗೆ ಮಾರುಹೋಗಿ ನಿಮ್ಮನ್ನ ಪ್ರೇಮಿಸಿದವಳು ನನ್ನಮ್ಮ. ಆದರೇ ಇಂದು ನನ್ನಂತೆಯೇ ನಿಮ್ಮಿಬ್ಬರ ಪ್ರೀತಿಯೂ ಬೀದಿ ಪಾಲಾಗಿದೆಯೆಂದರೇ ತಪ್ಪಾಗುತ್ತದೆಯೇ?
ನಿಮ್ಮಿಬ್ಬರ ಪ್ರೇಮದ ಮೊದಮೊದಲ ದಿನಗಳಲ್ಲಿ ನಾನಿಲ್ಲದಿದ್ದರೂ ನಿಮ್ಮಿಬ್ಬರ ಅದೆಷ್ಟೋ ಕಥೆಗಳನ್ನು ನಾನು ಬಲ್ಲೆ. ಅದೆಷ್ಟೋ ರಾತ್ರಿ, ಅಮ್ಮನಿಗೆ ನಿದ್ರೆ ಬಾರದಿದ್ದಾಗ ಅವೆಲ್ಲವನ್ನೂ ನೆನಪಿಸಿಕೊಂಡಿದ್ದರಿಂದ ನನಗೂ ನೆನಪಿದೆ. ಒಂದು ವಾಟ್ಸಾಪು ಮೆಸೇಜಿನಿಂದ ಶುರುವಾದ ನಿಮ್ಮ ಸ್ನೇಹ, ಸಲುಗೆ ಅದೊಂದು ಹಂತವನ್ನು ದಾಟಿ ಪ್ರೇಮದ ಹಾದಿ ಹಿಡಿಸಿತ್ತು. ಅಂದು ಕಲ್ಲುಗುಡ್ಡದಲ್ಲಿ ಅಮ್ಮ ನಿಮಗೆ ಕೊಟ್ಟ ಮೊದಲ ಮುತ್ತನ್ನು ನೀವು ಮರೆತಿರಬಹುದು, ಆದರೇ ನಾನು ಮರೆತಿಲ್ಲ.
ನೀವು ನಿಮ್ಮ RX 100 ಬೈಕಿನಲಿ ಹೋದ ಲಾಂಗ್ ರೈಡುಗಳು, ಸಾವನದುರ್ಗ, ಸ್ಕಂದಗಿರಿ, ಕೊಡಚಾದ್ರಿ ಚಾರಣಗಳು. ಅದೆಷ್ಟೋ ಟ್ರಿಪ್ಪುಗಳನ್ನು ನನ್ನ ಕಣ್ಣಿಗೆ ಕಟ್ಟುವಂತೆ ಬಿಡಿಸಿ ಬಿಡಿಸಿ ಚಿತ್ರಿಸಿದ್ದಾಳೆ ನನ್ನಮ್ಮ. ಹಾ ... ಅಪ್ಪಾ, ಅಮ್ಮಂಗೆ ನಿಮ್ಮ ಮೀಸೆ ಅಂದ್ರೇ ಬಾಳ ಇಷ್ಟ ಅಂತ ಯಾವಾಗ್ಲೂ ಹೇಳೋಳು.
ಬೆಂದಕಾಳೂರು ನಗರದಲ್ಲಿ ಪಬ್ಬುಗಳಿಗೇನು ಬರವೇ !!? ಅ,ಆ,ಇ,ಈ - A,B,C,D - ಮಗ್ಗಿಗಳನ್ನು ಬಾಯಿಪಾಠ ಮಾಡಿಸಲು ನೀವಿಬ್ಬರೂ ನನ್ನೊಡನೆ ಇಲ್ಲದಿದ್ದರೂ, ನೀವು ಹೋದ ಅದೆಷ್ಟೋ ಪಬ್ಬು ಬಾರುಗಳ ಹೆಸರುಗಳು ಮಾತ್ರ ನನಗೆ ಬಾಯಿಪಾಠವಾಗಿದೆ. ನೀವಿಬ್ಬರೂ ಹೋದ ಪಿಜ್ಜಾ, ಬರ್ಗರುಗಳ ಅಂಗಡಿಗಳ ಒಂದೊಂದು ಲೊಕೇಶನ್ ಗಳೂ ನನಗೆ ಗೊತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.
ಹಾಗೇ ಅಮ್ಮಾ, ಅವತ್ತು ಅಜ್ಜಿ ಹೇಳಿದ್ದು ನೆನಪಿದಿಯಾ?
"ನಿನ್ನ ಮಗುನಾ ಚೆನ್ನಾಗಿ ಓದಿಸಿ, ISRO ಗೇ ಸೇರಿಸ್ಬೇಕು. ಅವ್ನೂ ರಾಕೇಟು ಹಾರ್ಸೋದನ್ನ ನಾನು ಕಣ್ಣಾರೆ ನೋಡ್ಬೇಕು. ಅಷ್ಟೊಂದು ಆಗೋ ತನಕ ಆ ದೇವ್ರು ನಂಗೆ ಆಯುಷ್ಯ ಕೊಟ್ರೇ ಸಾಕು"
ನೆನಪಿದಿಯಾ ಈ ಮಾತುಗಳು ?
ಅವಾಗಿನ್ನೂ ನಾನು ಹೊಟ್ಟೆಯೊಳಗೆ ಹುಟ್ಟಿದ್ದೆಯಷ್ಟೇ.
"ನಿನ್ನ ಮಗುನಾ ಚೆನ್ನಾಗಿ ಓದಿಸಿ, ISRO ಗೇ ಸೇರಿಸ್ಬೇಕು. ಅವ್ನೂ ರಾಕೇಟು ಹಾರ್ಸೋದನ್ನ ನಾನು ಕಣ್ಣಾರೆ ನೋಡ್ಬೇಕು. ಅಷ್ಟೊಂದು ಆಗೋ ತನಕ ಆ ದೇವ್ರು ನಂಗೆ ಆಯುಷ್ಯ ಕೊಟ್ರೇ ಸಾಕು"
ನೆನಪಿದಿಯಾ ಈ ಮಾತುಗಳು ?
ಅವಾಗಿನ್ನೂ ನಾನು ಹೊಟ್ಟೆಯೊಳಗೆ ಹುಟ್ಟಿದ್ದೆಯಷ್ಟೇ.
ಬಹುಶಃ ಈ ಪತ್ರವನ್ನ ಬೇರೆ ಯಾರಾದರೂ ಓದಿದರೆ ? ಅವರಿಗೆ ನಾನ್ಯಾರೆಂಬುದು ತಿಳಿಯುವುದು ಹೇಗೆ? ಯಾಕೆಂದರೇ, ನಿಮ್ಮಿಬ್ಬರ ವಿನಃ ನನ್ನನ್ನ ನೋಡಿದವರು ಯಾರೂ ಇಲ್ಲವಲ್ಲ. ನಾನು ಯಾರೆಂಬುದೇ ಅವರ ಪ್ರಶ್ನೆಯಾದರೇ, ಅದಕ್ಕೇ ಉತ್ತರಿಸುವುದೂ ನನ್ನ ಕರ್ತವ್ಯ ಹಾಗೇ ಹಕ್ಕು ಕೂಡ.
ನಾನು ಅಂಕಲ್, ನಾನು, ನನ್ನ ಅಪ್ಪ ಅಮ್ಮನ ಆಸೆ, ಆಕಾಂಕ್ಷೆಗಳಿಗೆ, ಪ್ರೇಮದ ಪರಾಕಾಷ್ಟೆಗೆ. ಅವರಿಬ್ಬರೂ ಒಟ್ಟಾಗಿ ಪಡೆದ ಹತ್ತು ನಿಮಿಷದ ಸುಖಕ್ಕೆ ಉತ್ತರ.
ನಾನು ಆಂಟಿ, ಫೋನ್ ಕೋಡ್ ಇರುವ ಭೂ ಲೋಕದಿಂದ, ಪಿನ್ ಕೋಡ್ ಸಹ ಇರದ ಊರಿಗೆ, ಕೇವಲ ಮೂರೇ ಮೂರು ತಿಂಗಳಲ್ಲಿ ಪ್ರಯಾಣ ಮಾಡಿದ ಪ್ರಾಣಿ. ಅದಕ್ಕೇ ಪ್ರಾರಂಭದಲ್ಲೇ ಹೇಳಿದ್ದು, ಅವರು, ಅವರ ಕ್ಷೇಮಕ್ಕೆ ಪತ್ರ ಬರೆದರೂ ನನಗೆ ಸಿಗುವುದಿಲ್ಲವೆಂದು.
ನಾನು ಆಂಟಿ, ಫೋನ್ ಕೋಡ್ ಇರುವ ಭೂ ಲೋಕದಿಂದ, ಪಿನ್ ಕೋಡ್ ಸಹ ಇರದ ಊರಿಗೆ, ಕೇವಲ ಮೂರೇ ಮೂರು ತಿಂಗಳಲ್ಲಿ ಪ್ರಯಾಣ ಮಾಡಿದ ಪ್ರಾಣಿ. ಅದಕ್ಕೇ ಪ್ರಾರಂಭದಲ್ಲೇ ಹೇಳಿದ್ದು, ಅವರು, ಅವರ ಕ್ಷೇಮಕ್ಕೆ ಪತ್ರ ಬರೆದರೂ ನನಗೆ ಸಿಗುವುದಿಲ್ಲವೆಂದು.
ಅಯ್ಯೋ,ಇನ್ನೂ ಗೊತ್ತಾಗಲಿಲ್ಲವೇನು ? ಹೆಸರನ್ನು ಹೇಳೋಣವೆಂದರೇ, ನನಗೇ ಹೆಸರೇ ಇಲ್ಲವಲ್ಲ. ಹೆಸರಿಡುವ ಶಾಸ್ತ್ರವಿರಲಿ, ನಾನು ಹೆಣ್ಣೋ, ಗಂಡೋ ಎಂಬುದೇ ನನಗಿನ್ನೂ ಗೊತ್ತಿಲ್ಲ. ಕಾರಣ ನಾನು ಅಪ್ಪ ಅಮ್ಮನಿಗೆ ಮೂರೇ ತಿಂಗಳಲಿ ಬೇಡವಾದ "ಭ್ರೂಣ" ಸಾರ್.
ಬೇಡವೆಂದೇ ಬಂದ ಪಿಂಡ ಎನ್ನಲು ಅವರಿಗೂ ಸಾಧ್ಯವಿಲ್ಲ. ಯೇಕೆಂದರೇ ಅವರಿಬ್ಬರಿಗೂ ಮೊದಲೇ ಬೇಡಾಗಿದ್ದರೆ ನಾನು ಬರುತ್ತಲೇ ಇರಲಿಲ್ಲ. ಅವರಿಗೇ ನನ್ನ ಬಗೆಗೆ ಕಾಳಜಿ ಇರದಿರಬಹುದು, ಆದರೇ ನನಗೆ ಇದೆಯಲ್ಲ. ಎಷ್ಟಾದರೂ ಅವರು ನನ್ನ ಹೆತ್ತವರು. ಓಹ್, ಹೆತ್ತವರು ಎಂದರೂ ತಪ್ಪಾಗುತ್ತದೆ. ಅವರೇ ನನ್ನ ಹುಟ್ಟಿಗೆ ಕಾರಣರು. ಹಾಗಾಗಿ ಕುಶಲೋಪರಿ ವಿಚಾರಿಸುವುದು ನನ್ನ ಕಾರ್ಯ, ಹಾಗೆಯೇ ಕರ್ತವ್ಯ. ಒಂದು ಅರ್ಥದಲ್ಲಿ ಸಾವಿಗೂ ಅವರೇ ಕಾರಣರಾದರೂ ಈಗ ಅದು ನನಗೆ ಅನಾವಶ್ಯಕ.
ಅಪ್ಪಾ, ಅಮ್ಮ, ನಾನು ಇಲ್ಲಿ ಅಲ್ಲಿಗಿಂತಲೂ ಕ್ಷೇಮವೆಂದು ಅದಾಗಲೇ ಹೇಳಿದ್ದೇನೆ. ಅಲ್ಲಿಗಿಂತಲೂ ನೆಮ್ಮದಿಯಿಂದ ಇದ್ದೇನೆ. ಯಾವುದೇ ಜಂಜಾಟವಿಲ್ಲ. ಯಾವ ತಲೆಬಿಸಿಯೂ ಇಲ್ಲ. ಜೊತೆಗೆ ಆ ಮೂರು ತಿಂಗಳು ಅಮ್ಮನ ಹೊಟ್ಟೆಯೊಳಗೆ ಇದ್ದಾಗಿನ 'ಯಾವಾಗ ಹೊರಗೆಳೆದು ಹಾಕುವರೋ' ಎಂಬ ಭಯವಂತೂ ಇಲ್ಲವೇ ಇಲ್ಲ. ಈಗ ನಾನೊಂದು ಸ್ವಛ್ಛಂದ ಹಕ್ಕಿ.
ಇಲ್ಲಿ ನಾನೊಬ್ಬನೇ ಅಲ್ಲ. ನನ್ನೊಡನೆ ನನ್ನಂತೆಯೇ ಇರುವ ಹಲವರು ಒಟ್ಟಿಗೇ ಇದ್ದೇವೆ. ಕಟ್ಟುಪಾಡೆಂಬ ಮದುವೆಗೂ ಮುನ್ನ, ತಮ್ಮ ಎಲ್ಲೆಯ ಮೀರಿ, ತಪ್ಪನ್ನು ಮಾಡಿ, ಮತ್ತದೇ ಸಮಾಜಕ್ಕೆ ಹೆದರಿ, ಕಿತ್ತೆಗೆದು ಎಸೆದ ಅದೆಷ್ಟೋ ಕಣ್ಣು ಬಿಡದ, ಹೆಸರಿಡದ, ಕಂದಮ್ಮಗಳೂ ನನ್ನೊಡನೇ ಇದ್ದಾರೆ. ಬೇಸರವೇನೆಂದರೆ, ತಮ್ಮ ಪ್ರೀತಿಯಲಿ ತಲ್ಲೀನರಾಗಿ, ನಮ್ಮ ಇಂದಿನ ಈ ಪರಿಸ್ಥಿತಿಗೆ ಕಾರಣರಾದವರ್ಯಾರೂ ಇಂದು ಒಂದಾಗಿ ಇಲ್ಲ. ಅಮ್ಮನ ಗಂಡನನ್ನು ಅಪ್ಪ ಎನ್ನಲು ಮನಸಾಗುವುದಿಲ್ಲ, ಅಂತೆಯೇ, ಅಪ್ಪನ ಹೆಂಡತಿಯನ್ನು ಅಮ್ಮ ಎನ್ನಲೂ ಧೈರ್ಯ ಬರುವುದಿಲ್ಲ.
ಇಷ್ಟಲ್ಲಾ ಆದಮೇಲೂ ನನ್ನದು ಒಂದೇ ಪ್ರಶ್ನೆ. ನಿಮಗೆ ಬೇಡವೆಂದ ಮೇಲೆ, ಈ ಸಮಾಜವನು ಎದುರಿಸಲು ಆಗದು ಎಂದಮೇಲೆ, ಪವಿತ್ರವಾದ ಪ್ರೀತಿ ಇಷ್ಟಕ್ಕೇ ಸೀಮಿತ ಎಂದಮೇಲೆ, ನನ್ನನ್ನು ಯಾವ ಕಾರಣಕ್ಕಾಗಿ ಹುಟ್ಟಿಸಿದಿರಿ? ಬರಿಯ ಮೂರೇ ತಿಂಗಳು ನಿಮ್ಮೊಡನಿರಲು ನನಗ್ಯಾಕೆ ಅವಕಾಶ ಮಾಡಿಕೊಟ್ಟಿರಿ? ನೀವು ಅಂದು ನನ್ನನ್ನು ತುಂಡು ತುಂಡಾಗಿ ಹೊರಗೆಳೆದು ಹಾಕುವಾಗ ನನ್ನ ನೋವನ್ನು ಯೋಚಿಸಿದ್ದೀರೇನು? ನಿಮ್ಮನ್ನೂ ಹಾಗೆಯೇ ಕಾಲು, ಕೈ, ತಲೆಯೆಂದು ತುಂಡರಿಸಿದರೆ ನ್ಯಾಯಾಲಯದಲ್ಲಿ ಗಲ್ಲುಶಿಕ್ಷೆ. ನನ್ನನ್ನು ಹಾಗೆ ತುಂಡರಿಸಿದ ನಿಮಗೆ ಅದ್ಯಾವ ಶಿಕ್ಷೆ?
ಇರಲಿ ಬಿಡಿ, ಎಲ್ಲವೂ ಅವರವರ ಹಣೆಬರಹ. ಮತ್ತೆ ಈ ಪತ್ರದಿಂದ ನೊಂದು ನಿಮ್ಮ ಆರೋಗ್ಯ ಹದಗೆಡದಿದ್ದರೆ ಅಷ್ಟೇ ಸಾಕು. ಆದರೆ ನೆನಪಿರಲಿ, ನೀವು ಕೊಂದಿದ್ದು ಒಂದು ಜೀವವನ್ನಲ್ಲ, ಭವಿಷ್ಯವನ್ನ.
ಇಂತು,
- ನಾ"ನೊಂದು" ಭ್ರೂಣ

Excellent.
ReplyDeleteತ್ಯಾಂಕ್ ಯೂ
DeleteAmazing
ReplyDeleteTnk u 😊
DeleteNo words 🙏
ReplyDeleteplz, find some words
ReplyDeleteKelavondu saalugalu manassina tantugalanna koriyuttave, nice wordings phani..
ReplyDeleteTumbaa tnkxx
Deleteತುಂಬಾ ಚೆನ್ನಾಗಿದೆ, ನಿನಗೆ ಒಳ್ಳೆ ಕಲೆ ಇದೆ, ಒಳ್ಳೆ ಕೆಲಸಕ್ಕೆ ಉಪಯೋಗಿಸು, ಇನ್ನು ಹೆಚ್ಚು ಹೆಚ್ಚು ಬರಹಗಳನ್ನು ಬರೆ.
ReplyDeletePakka baryana 😊
Delete