ಹಾಸ್ಟೆಲ್ ಕಥೆಗಳು - ೧
ಈ ದಿನ ನನ್ನ ಮನಸಲಿ ...
ಬೇಸರ ಮುಸುಕಿದ ವಾತಾವರಣ ...!!!
ಅದೇಕೋ ಗೊತ್ತಿಲ್ಲ, ಇವತ್ತು ಮನಸಲಿ ಬೇಸರ ಮುಸುಕಿದ ವಾತಾವರಣ. ಕೆಲವೇ ಕೆಲವು ದಿನಗಳ ಹಿಂದಷ್ಟೇ, ನವೇ ಸೀನಿಯರ್ಗಳು ಎಂದು ಖುಷಿಯಲ್ಲಿದ್ದೆವು . ಇವಾಗಿರೋ ಸೀನಿಯರ್ ಎಲ್ಲಾ ಯಾರೂ ಇರಲ್ಲ, ಇನ್ಮೆಲೇ ನಾವೇ ಎಲ್ಲಾ, ನಮ್ಮಿಂದನೇ ಎಲ್ಲಾ, ಅನ್ಕೊಂಡಿದ್ವಿ.
ಆದ್ರೇ ಇವತ್ತು ನಮ್ಮ ಸೀನಿಯರ್ ಗಳು ಒಬ್ಬಬ್ರೇ ಹಾಸ್ಟೆಲ್ ಬಿಡ್ತಾ ಇದ್ದರೇ, ಮನಸಲ್ಲಿ ಯಾರನ್ನೋ ಕಳಕೊಂಡ ಅನುಭವ. ಅವರ ಮತ್ತು ನಮ್ಮ ನಡುವಿನ ಅಟ್ಯಾಚ್ಮೆಂಟೋ, ಅಥವಾ ನಮಗೂ ಈ ಹಾಸ್ಟೆಲ್ ನ ಋಣ ಇನ್ನಾ ಒಂದೇ ವರ್ಷ ಅಂತಲೋ ಗೊತ್ತಿಲ್ಲಾ, ಎಷ್ಟೇ ಪ್ರಯತ್ನಿಸಿದರೂ ನನ್ನ ಮನಸಿನ ದುಗುಡ ಕರಗುತ್ತಿಲ್ಲ.
ಎಲ್ಲೆಲ್ಲೋ ಇದ್ದವರು ಇಲ್ಲಿ ಒಂದಗಿಹೆವು...
ಇದುವೆ ನಮ್ಮ ಮನೆಯೆಂದು, ನಾವಂದುಕೊಂಡಿಹೆವು...||
ಸ್ನೇಹ - ಪ್ರೀತಿಯಾ ಮೀರಿದಾ ಬಂಧವಿದು ...
ಅನುಬಂಧದ ಈ "ಅನರ್ಘ್ಯ" ಕೊಂಡಿ ಎಂದೂ ಕಳಚದು ...||
ಹೌದು, ಯಾರದ್ದೂ ಯಾವೂರು ಗೊತ್ತಿರಲಿಲ್ಲ. ಇಲ್ಲಿ ಬಂದೆವು, ಇವರನ್ನ ಅಣ್ಣಾ ಎಂದು ಕರೆದೆವು. ಸ್ವಂತ ಅಣ್ಣಂದಿರಿಗಿಂತಾ ಇವರನ್ನೇ ನೆಚ್ಚಿಕೊಂಡಿದ್ದೆವು. ಅದ್ಯಾಕೋ ಕಳೆದ ವರ್ಷ ಸೀನಿಯರ್ಸ್ ಬಿಡುವಾಗ ಹೀಗೆ ಬೇಜಾರಿರಲಿಲ್ಲ. ನಮಗೂ ಅವರಿಗೂ ಅಷ್ಟು ಗೆಳೆತನವೂ ಇರಲಿಲ್ಲ, ಮತ್ತು ನಮ್ಮ ಹಾಸ್ಟೆಲ್ ಬಿಡೋ ದಿನಗಳೂ ದೂರ ಇತ್ತು . ಆದ್ರೇ ಇವತ್ತು ಇವರೆಲ್ಲಾ ಬಿಡ್ತಿದ್ರೇ, ಹಾಸ್ಟೆಲ್ ನಲ್ಲಿ ಅವರೊಡನೆ ಕಳೆದ ಕೆಲವು ಕ್ಷಣಗಳು ಕಣ್ಮುಂದೆ ಬರುತ್ತವೆ .
ನಾನು ಅವರೊಡನೆ ಅಷ್ಟೆಲ್ಲಾ ಬೆರೆತು ಮಾತಾಡದೇ ಇದ್ದರೂ, ಆ ಒಂದು ಸ್ನೇಹ ಸಂಬಂಧ ಎಂತಹವರನ್ನೂ ಬೇಸರ ಮಾಡಿಸತ್ತೆ. ಸ್ಕಂದಣ್ಣ, ಅರುಣಣ್ಣ, ಜಗ್ಗಣ್ಣ, ವಾದಿರಾಜಣ್ಣ, ಅಭಿಲಾಷಣ್ಣ, ಸೌರಭಣ್ಣ, ವಿದ್ಯಣ್ಣ(ಬೆಂಕಿ), ಶ್ರೀಕು ಭಾಯ್ , ಹೇಳ್ತಾ ಹೋದ್ರೇ ಪ್ರತಿಯೊಬ್ಬರನ್ನೂ ಒಂದಲ್ಲಾ ಒಂದು ಕಾರಣಕ್ಕೆ ನೆನೆಯಲೇ ಬೇಕು.
ಅವರೆಲ್ಲರ ಕೆಲಸಗಳು, ಹಾಸ್ಯಭರಿತ ಮಾತುಗಳು,ಸ್ಪೋರ್ಟ್ಸ್ ಡೇ, ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಟಲ್ ಡೇ, ಎಲ್ಲಾ ನೆನಪಿಸಿಕೊಳ್ಳಬೇಕು. ಗುರುವಾರ ಹಣ್ಣು, ತಿಂಗಳ ಕೊನೇ ದಿನ ಸ್ವೀಟು, ಹೊಸ ಯೋಜನೆಗಳು. ಎಲ್ಲಾ ಸೀನಿಯರ್ ಗಳೂ ನಾವ್ ಕೇಳಿದ ಕೂಡಲೇ ಅವರ ಹಳೆಯ textbook ಗಳನ್ನ ಕೊಡೋರು. ಛೇ ಹೇಳ್ತಾ ಹೋದ್ರೇ ಒಂದೆರಡಲ್ಲಾ. ಎಷ್ಟೇ ಪ್ರಯತ್ನ ಪಟ್ಟರೂ ನಮ್ಮ ಮನಸಲಿ ಯಾರನ್ನೂ, ಯಾವುದನ್ನೂ ಅಳಿಸಕ್ಕಾಗಲ್ಲ.
ಕೆಲೋ ಸಾರಿ ಮನಸಲ್ಲೇ ಬೈಕೊಂಡಿದ್ದೂ ಇದೆ, ಇವರೆಲ್ಲಾ ಯಾಕ್ ಹೀಗೆ ನಮಗೇ ಬೈತಾರೆ ಅಂತ. ಆದ್ರೇ ನಾವು ಇವಾಗ ಸೀನಿಯರ್ ಆಗಿದೀವಿ ಅವರ tension ಇವಾಗ ನಮಗೆ ಅರ್ಥ ಆಗ್ತಾ ಇದೆ.
ನನ್ನ ಜೀವನದಲ್ಲಿ "ಮಾಧ್ವ ಯುವಕ ಸಂಘ"ನೇ ನನ್ನ ಮೊದಲ ಹಾಸ್ಟಲ್, ಅತಿಶಯೋಕ್ತಿ ಅಂತಲ್ಲಾ ಬೇರೆಯವರಿಗೂ ಇಂಥಾ ಸೀನಿಯರ್ಸ್ ಸಿಗ್ತಿದ್ರೋ ಗೊತ್ತಿಲ್ಲಾ. But we are luckey to have such seniors.
ಆದ್ರೇ ಏನೂ ಮಾಡಲಿಕ್ಕೆ ಆಗಲ್ಲಾ. ಇವತ್ತು ಇವರು, ನಾಳೆ ನಾವು. ಕಾಲಚಕ್ರ ಸಾಗ್ತಾನೇ ಇರತ್ತೆ, ಜೀವನ ಅನ್ನೋ ಗಾಡಿ ಮುಂದೆ ಸಾಗ್ತಾನೇ ಇರತ್ತೆ. ಈ ಗಾಡಿ ನಮ್ಮ BMTC ಬಸ್ ಇದ್ದಂಗೆ. ನಾವು ಟಿಕೇಟ್ ತಗೊಂಡಿರೋ ಸ್ಟಾಪ್ ಬರೋತನಕ ಮಾತ್ರ, ನಮ್ಮ ಸ್ಟಾಪ್ ಬರ್ತಿದ್ದಂಗೆ ಇಳ್ಕೊಂಡು ಹೋಗ್ತಾ ಇರಬೇಕು , ಬೇರೆಯವರಿಗೆ ದಾರಿ ಮಾಡಿಕೊಡಲೇ ಬೇಕು. ಆ ಗಾಡಿಲಿ ಇರುವಷ್ಟು ಹೊತ್ತು ಎಲ್ಲವನ್ನೂ ಅನುಭವಿಸಬೇಕು. ಕಷ್ಟ , ಸುಖ,ದುಃಖ, ಸಂತೋಷ, ಗೆಲುವು, ಸೋಲು, ಸಿಟ್ಟು, ಜಗಳ, ಗೆಳೆತನ, ದ್ವೇಷ, ಆಟ, ಪಾಠ, ಸಂಸ್ಕಾರ ಪ್ರತಿಯೊಂದನ್ನೂ ಅನುಭವಿಸಿ ನಾವು ಆ ಗಾಡಿಯಿಂದ ಇಳಿದು ಬೇರೆಯವರಿಗೆ ಅನುಭವಿಸಲು ಬಿಡಬೇಕು. ಎಲ್ಲಾ ನನಗೇ ಬೇಕು ಅನ್ನೋದು ತಪ್ಪಾಗತ್ತೆ.
ಇನ್ನೂ ಏನೂ ಹೇಳಲು ಬಾಯಿ ಹೊರಡ್ತಾ ಇಲ್ಲಾ, ಬೇರೆಯವರಿಗೆ ಏನೋ ಗೊತ್ಕೊತಿಲ್ಲಾ ,... ಆದ್ರೇ ನನಗೆ ಮಾತ್ರಾ ಕೊನೇದಾಗಿ ...
ಕಣ್ಣಂಚಲಿ ಹನಿ ಮೂಡಿದೆ,
ನಿಮ್ಮೊಡನೆ ಕಳೆದ ದಿನಗಳ ನೆನೆದು...
ಮನದಾಳದಿ ದುಗುಡ ತುಂಬಿದೆ,
ನಮ್ಮಯ ನಾಳೆಯ ನೆನೆದು,...
ನಮ್ಮಯ ನಾಳೆಗೆ ಕಾದು ...||
ಇಂತಹಾ "ಅನರ್ಘ್ಯ" ಸೀನಿಯರ್ ಗಳಿಗೆ ... "ಅನರ್ಘ್ಯ" ಶುಭಾಶಯ ...
- ಕೆ. ಸಿ. ಪಿ. ಕಾರಂತ್
ಕಮ್ಮರಡಿ
Chennagi bardiddiya Phani :) Miss you all and the hostel.....All the best...
ReplyDeleteTnk Anna ... Miss u ppl too ...
DeleteTop 10 best slots casinos in US - JT Hub
ReplyDeleteThe first thing we noticed was the fact 정읍 출장샵 that many of 목포 출장안마 the top slot sites in the USA were illegal in the USA. 남양주 출장안마 In 공주 출장마사지 fact, most of the casinos that were 삼척 출장마사지 licensed by the United
zm518 fake designer bags uv749
ReplyDelete