Posts

Showing posts from February, 2019

ನಿಟ್ಟುಸಿರು

Image
"ನಿಟ್ಟುಸಿರು" ಕಂಡು ಅವನ ಮೊದಲ ಉಸಿರು...!!!    ' ದಾವಣಗೆರೆ ' ಹೆಸರು ಕೇಳಿದರೇ, ದೋಸೆಯ ನೆನಪಾಗಿ ಬಾಯಲ್ಲಿ ನೀರು ಬಾರದೇ ಇರದು. ಇದು ಬೆಣ್ಣೆ ದೋಸೆಯಾ ನಗರಿ. ಹೇಳುವಂತಹಾ ದೊಡ್ಡ ನಗರವಲ್ಲದಿದ್ದರೂ ಜಿಲ್ಲಾ ಕೇಂದ್ರವಾದ್ದರಿಂದ, ವ್ಯಾಪಾರ ವಹಿವಾಟಿಗೆ ಕಮ್ಮಿಯಿಲ್ಲ. ನಾನು ಹೇಳ ಹೊರಟಿರುವ ಕಥೆಯೂ ಇಲ್ಲಿಯದೇ.    ಅದೊಂದು ಸಾಯಂಕಾಲ, ಸುಮಾರು ಹತ್ತರಿಂದ ಹನ್ನೆರಡು ತೆಂಗಿನ ಸಸಿಯಿದ್ದ ಮನೆಯ ಹಿಂದಿನ ಕೈತೋಟಕ್ಕೆ ನೀರನ್ನು ಹಾಯಿಸಿ ಮನೆಯ ಕಡೆಗೆ ಹಿಂದಿರುಗುವಾಗ ಕುಸುಮಳ ಮನದಲ್ಲಿ ಅದೇನೋ ತೃಪ್ತಿ. ಮೂಲತಃ ಕೃಷಿ ಕುಟುಂಬದಿಂದಲೇ ಬಂದಿದ್ದ ಕುಸುಮ, ಮದುವೆಯಾದದ್ದು ಮಾತ್ರಾ ಹೋಟೆಲ್ಲು ವ್ಯಾಪಾರಿ ರಾಘವೇಂದ್ರನನ್ನ. ಆದರೂ ಕುಸುಮಳಿಗೆ ಅದೇನೋ ಕೃಷಿ ಮಾಡಬೇಕೆಂಬುದೊಂದೇ ಆಸೆ. ನೆಟ್ಟ ತೆಂಗಿನ ಸಸಿಗಳೆಲ್ಲವೂ ಮರವಾದಂತೆ, ಅದರಿಂದ ಎಳನೀರ ಇಳಿಸಿ ಮಕ್ಕಳಿಗೆ ಕುಡಿಸಿದಂತೆ, ಕೈತೊಟದಮಲ್ಲೇ ಬೆಳೆದ ತರಕಾರಿಯಲ್ಲೇ ದಿನವೂ ಅಡಿಗೆ ಮಾಡಿದಂತೆ ಹೀಗೆ ಹತ್ತು ಹಲವು ಕನಸುಗಳನ್ನು ಅದಾಗಲೇ ಕಂಡಿದ್ದಳು ಕುಸುಮ. ಅದೇನೋ ಹೇಳ್ತಾರಲ್ಲಾ 'ಕೂಸು ಹುಟ್ಟುವ ಮುಂಚೆ, ಕುಲಾವಿ ಹೊಲಿಸಿದರಂತೆ' ಹಾಗೆ.    ಕುಸುಮ ತುಂಬು ಗರ್ಭಿಣಿಯಾದರೂ, ಮಾಡುವ ಕೆಲಸಗಳ ಬಿಟ್ಟವಳಲ್ಲ. ಮನೆಯ ಹಿಂದಿನ ತೋಟಕ್ಕೆ ನೀರು ಹಾಯಿಸಿ, ಗರ್ಭದಲ್ಲಿ ಸುಮ್ಮನೇ ಮಲಗಿದ್ದ ಮಗುವನ್ನೂ ಮಾತನಾಡಿಸಿ, ಸೂರ್ಯನು ಕಣ್ಮರೆಯಾಗುವ ಸುಳಿವು ನೀಡಿದ್ದರಿಂ...