Posts

Showing posts from February, 2018

"ತ್ಯಾಗಿ" ಭಾಗ - 5 ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!!

Image
ಭಾಗ - 5 "ತ್ಯಾಗಿ" ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!! (ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕಾತಾಳೀಯವಷ್ಟೇ) ನಾರಾಯಣಯ್ಯನಿಗೋ ವಯಸ್ಸಾಗುತ್ತಿತ್ತು. 80 ಯುಗಾದಿಯನ್ನೂ ಕಂಡಿದ್ದಾಗಿತ್ತು. ವಯೋಸಹಜ ಖಾಯಿಲೆಗಳು ಅವರನ್ನೂ ಬಿಟ್ಟಿರಲಿಲ್ಲ. ಆದರೇ ಹುಷಾರಿಲ್ಲ ಎಂಬ ಕಾರಣಕ್ಕೆ ಯಾವತ್ತೂ ಮಲಗಿದವರಲ್ಲ. ಅವರದ್ದೋ ಎರಡನೆಯ ಮಗ ಗಣೇಶನಿಗೆ ಮದುವೆ ಮಾಡಿಸಬೇಕೆಂಬುದೊಂದೇ ಹಠ. ಆದರೇ ಗಣೇಶ ಮಾತ್ರ ಯಾವ ಕಾರಣಕ್ಕೂ ಒಪ್ಪಿದವನಲ್ಲ. ಅಣ್ಣನ ಮದುವೆಯ ಸಂದರ್ಭದಲ್ಲಿ ತನ್ನ ಮದುವೆಗೆ ಕಾಯುತ್ತಲಿದ್ದ ಗಣೇಶ, ಈಗ ಮಾತ್ರ ಮದುವೆಯಾಗಲ್ಲ ಎಂಬುದಕ್ಕೆ ಕಾರಣವೂ ಇತ್ತು. ಎಲ್ಲಿ ಮದುವೆಯಾದರೆ ಬಂದ ಮಡದಿಯಿಂದ ತನ್ನ ಮನೆ ಒಡೆದು ಎರಡು ಪಾಲಾಗಬಹುದೇನೋ? ನನಗೆ ಮಕ್ಕಳಾಗಿ ಎಲ್ಲಿ ತನ್ನ ಅಣ್ಣನ ಮಕ್ಕಳ ಮೇಲೆ ಪ್ರೀತಿ ಕಡಿಮೆಯಾಗಬಹುದೇನೋ ಎಂಬುದು ಅವನ ಯೋಚನೆಯಾಗಿತ್ತು. ಹಾಗಾಗಿ ನಾರಾಯಣಯ್ಯ ಎಷ್ಟು ಒತ್ತಾಯ ಮಾಡಿದರೂ ಗಣೇಶ ಕೇಳುವಂತವನಾಗಿರಲಿಲ್ಲ. ಅದಲ್ಲದೆ, ಇಂದಿಗೂ ಅದೊಂದು ಪೂರ್ವಾಗ್ರಹ ಪೀಡಿತ ಹಳ್ಳಿಯಾಗಿ, ಹಾಳು ಕೊಂಪೆಯಂತೇ ಇದ್ದಿದ್ದರಿಂದ ಯಾರೂ ಹೆಣ್ಣು ಕೊಡಲೂ ಮುಂದೆ ಬಂದಿರಲಿಲ್ಲ. ಸುಬ್ರಹ್ಮಣ್ಯನ ಮಕ್ಕಳೂ ದೊಡ್ಡವರಾದರು. ದೊಡ್ಡವನು ಪಿಯುಸಿ ಓದುತ್ತಿದ್ದರೆ, ಮಗಳು ಮತ್ತು ಮಗ ಈಗ ಹೈಸ್ಕೂಲು. ಪುಷ್ಪವತಿಗೂ ಮಕ್ಕಳ ಭವಿಷ್ಯ ...

"ತ್ಯಾಗಿ" ಭಾಗ - 4 "ಜಿಮ್ಮಿ"

Image
"ತ್ಯಾಗಿ" ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!! ಭಾಗ - 4 "ಜಿಮ್ಮಿ" (ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕಾತಾಳೀಯವಷ್ಟೇ) ಹೀಗೆ ವರ್ಷಗಳು ಉರುಳಿದವು. ಸುಬ್ರಹ್ಮಣ್ಯನಿಗೂ ಒಂದರ ಹಿಂದೆ ಒಂದರಂತೆ ಮೂರು ಮಕ್ಕಳೂ ಆದವು. ಈ ವಿಷಯದಲ್ಲಿ ಸುಬ್ರಹ್ಮಣ್ಯ ಗಟ್ಟಿಗ ಬಿಡಿ. ಎಲ್ಲವನ್ನೂ ಹೇಳಿ ಅವರ ಮನೆಯ "ಜಿಮ್ಮಿ" ಯ ಬಗ್ಗೆ ಹೇಳದೇ ಇದ್ರೇ ಕಥೆಯ ಒಂದು ಮುಖ್ಯಘಟ್ಟವನ್ನೇ ಬಿಟ್ಟಂತೆ. ಜರ್ಮನ್ ಶೆಫ.ರ್ಡ ಜಾತಿಗೆ ಸೇರಿದ ನಾಯಿಯದು.  ನಾಯಿಗಳಲ್ಲೇ ಅತ್ಯಂತ ನಿಷ್ಠಾವಂತ ಜಾತಿಯೆಂದರೇ, ಅದು ಜರ್ಮನ್ ಶೆಫ.ರ್ಡ್. ಸಾಮಾನ್ಯವಾಗಿ ಮಲೆನಾಡಿನ ಎಲ್ಲರ ಮನೆಯಲ್ಲೂ ನಾಯಿ ಸಾಕುವುದು ಮಾಮೂಲಿ.ಕಾರಣ, ಒಂದು ಕಳ್ಳ ಕಾಕರ ಭಯ, ಇನ್ನೊಂದು ಶಿಕಾರಿ. ಕಳ್ಳಕಾಕರೆಂದರೇ ಬರಿಯ ಮನುಷ್ಯರಲ್ಲ, ಕಾಡು ಪ್ರಾಣಿಗಳೂ ಹೌದು. ಮಾನವ ವಿಕಾಸವನ್ನೇ ನೋಡಿದರೆ ಮೊದಲು ಮಾನವನ ಸ್ನೇಹಿತನಾಗಿದ್ದು ನಾಯಿಯೇ ಅಲ್ಲವೇನು? ಕಾಡುಗಳಿಂಲೇ ಸುತ್ತುವರೆದಿರುವ ಕಾಡುತೋಟದ ಮನೆಯನ್ನು ಕಾಯಲು ನಿಷ್ಠಾವಂತ ನಾಯಿ ಬೇಕೇ ಬೇಕು.  ಭಟ್ಟರು ಸಸ್ಯಾಹಾರಿಯಾದ್ದರಿಂದ ಜಿಮ್ಮಿಯನ್ನು ಶಿಕಾರಿಗೆಲ್ಲ ಕರೆದೊಯ್ದಿದ್ದು ಇಲ್ಲ. ಆದ್ರೇ ಮುಂಡೇದು ಈ ಜಿಮ್ಮಿ ನಾಯಿಬುದ್ದಿ ಬಿಡಬೇಕಲ್ಲ. ಯಾವಗ್ಲಾದ್ರೂ ಕಾಡಿನಕಡೆಗೆ ಅವನೇ ಶಿಕಾರಿಗೆ ಹೋಗಿ, ಮೊ...

"ತ್ಯಾಗಿ" ಭಾಗ - 3 "ಮದುವೆ ಮನೆ"

Image
"ತ್ಯಾಗಿ" ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!! ಭಾಗ -  3 "ಮದುವೆ ಮನೆ" (ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕಾತಾಳೀಯವಷ್ಟೇ.) ಹಾಗೋ ಹೀಗೋ ನಿಶ್ಚಿತಾರ್ಥ ಮುಗಿಸಿ, ಮದುವೆಯ ದಿನಾಂಕ ನಿಗದಿಪಡಿಸಿದ್ದಾಯಿತು. ಮದುವೆಯನ್ನು ಉತ್ತಮೇಶ್ವರದ ದೇವಸ್ಥಾನದಲಿ ಮಾಡುವುದೆಂದು ತೀರ್ಮಾನಿಸಿದ್ದೂ ಆಯ್ತು. ಆಗೆಲ್ಲಾ ಮದುವೆಗಳು ದೇವಸ್ಥಾನದಲ್ಲೇ ಆಗುತ್ತಿದುದು ಜಾಸ್ತಿ. ಛತ್ರದಲ್ಲಿ ಮದುವೆ ಮಾಡಿಸಿದರೇ ಶ್ರೀಮಂತರೆಂದೇ ಹೇಳಲಾಗ್ತಾ ಇತ್ತು. ಮತ್ತೆ ಮದುವೆಯೆಂದರೇ, ಲಾಡು, ಪಾಯಸದ ಊಟವೇ ವಿಶೇಷದ ಲೆಕ್ಕ. ಆದರೇ ಈಗ ಮದುವೆಗೆ ಮೂರರಿಂದ ನಾಲ್ಕು ಸ್ವೀಟು, ಮಂಚೂರಿ, ಸೂಪು, ತರಹೇವಾರಿ ಅಡುಗೆಗಳ ಸಾಲು ಸಾಲೇ ಹೇಳಬಹುದು. ಮದುವೆಯ ಆಮಂತ್ರಣವನ್ನೂ ಮುದ್ರಿಸಿದ್ದಾಯ್ತು. ಸೂರಯ್ಯ ಸ್ವಲ್ಪ ಹಠವಾದಿ. ಬೇರೆ ಯಾರ ಮಾತನ್ನೂ ಕೇಳುವವನಲ್ಲ. ನಾರಾಯಣಯ್ಯನೂ ಇವರಿಗೆ ಪ್ರಭಲ ಸರಿಸಾಟಿಯೇ ಎಂದು ನೀವೂ ಬಲ್ಲಿರಿ. ಎಷ್ಟದರೂ ಗಂಡಿನ ಕಡೆಯವರಲ್ವೇ? ಸ್ವಲ್ಪವಾದರೂ ಗತ್ತು ತೋರಿಸಬೇಕು. ಜೊತೆಗೆ ಹೆಣ್ಣಿನ ಕಡೆಯವರಿಗೆ ತೊಂದರೆ ಕೊಡಬೇಕು. ಅದಕ್ಕೆ ಸರಿಯಂತೆ, ಇಷ್ಟಲ್ಲಾ ಆದಮೇಲೇ ನಾರಾಯಣಯ್ಯ "ವಧುವಿಗೆ ಎರಡೆಳೆ ಸರವನ್ನೇ ಹಾಕಬೇಕು, ಜೊತೆಗೆ ಗಂಡಿಗೆ hmt ವಾಚು ಉಡುಗೊರೆಯಾಗಿ ಕೊಡಬೇಕು" ಎಂದು ಹಠ ಹಿಡಿದರು. ...

"ತ್ಯಾಗಿ" ಭಾಗ - 2 "ಕಲ್ಲುಗುಡ್ಡೆಯ ಜಾಡು ಹಿಡಿದು"

Image
"ತ್ಯಾಗಿ" ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!! ಭಾಗ - 2 "ಕಲ್ಲುಗುಡ್ಡೆಯ ಜಾಡು ಹಿಡಿದು" (ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕಾತಾಳೀಯವಷ್ಟೇ.) ಸುಬ್ರಹ್ಮಣ್ಯ ಮತ್ತು  ಗಣೇಶ ಅಣ್ಣ -ತಮ್ಮ ಎಂದರೆ ಹೀಗಿರಬೇಕು ಎಂದು ಬೇರೆಯವರೆಲ್ಲಾ ಬೊಟ್ಟು ಮಾಡಿ ತೋರ್ಸೋ ತರ ಇದ್ದವರು. ಇಬ್ಬರಿಗೂ ವಿದ್ಯೆ ನೈವೇದ್ಯೆ ಆಗಿದ್ರಿಂದಾ, ವಂಶಪಾರಂಪರ್ಯವಾಗಿ ಬಂದ ವೃತ್ತಿಯನ್ನೇ ಮುಂದುವರೆಸಿದ್ರು. ಅದೇ ರೈತಾಪಿ ಜೀವನ - ರೈತಪಾಪಿ ಜೀವನ. ಅದ್ಯಾರು ಹೇಳಿದ್ರೋ, ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬೆಳೆದು, ಸಾಲದಲ್ಲೇ ಸಾಯ್ತಾರೆ ಎಂದು. ಹಾಗೆಯೇ ಇಂದಿಗೂ ಇರುವುದು ಸುಳ್ಳಲ್ಲ. ರೈತರು ಮಾತ್ರವಲ್ಲದೇ, ಭಾರತದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಈಗ ಇದೇ ಪರಿಸ್ಥಿತಿ. ಸುಭ್ರಹ್ಮಣ್ಯನಿಗೋ ಮದುವೆಯ ವಯಸ್ಸು ಮೀರ್ತಾ ಇತ್ತು. ನಾರಾಯಣಯ್ಯನದೋ ಒಂದೇ ಹಠ, ಏನಾದರೂ ಮಾಡಿ ಮಗನ ಮದುವೆ ಮಾಡಲೇಬೇಕು ಎಂದು ಹರಕೆ ಹೊತ್ತಿದ್ದರು. ಗಣೇಶನಿಗೋ ಅಣ್ಣನ ಮದುವೆಯಾದ್ರೇ ಮುಂದಿನದು ಇವನದೇ ಎಂಬ ಆಸೆ. ಸುಬ್ರಹ್ಮಣ್ಯನ ಜಾತಕ ಹೊರಡಿಸಿಬಿಟ್ಟರು. ಅಲ್ಲಾ, ಈ ಕಾಡುತೋಟವೆಂಬ ಅಕ್ಷರಶಃ ಕಾಡುಕೊಂಪೆಯಲ್ಲಿ ಇರುವ ಈ ಕಾಡು ಮನುಷ್ಯನಿಗೆ ಹೆಣ್ಣು ಕೊಡುವವರ್ಯಾರು? ಆದರೇ, ಆಗ ಕಾಲವೂ ಹಾಗೇ ಇತ್ತೆನ್ನಿ. ಈಗಿನ ಹುಡುಗಿಯ...

"ತ್ಯಾಗಿ" ಭಾಗ -1 "ಅವರವರ ಭಾವಕ್ಕೆ, ಅವರವರ ಭಕುತಿಗಂ"

Image
"ತ್ಯಾಗಿ" ತನ್ನವರಿಗಾಗಿ ತನ್ನದೆಲ್ಲವ ತೊರೆದವನು...!!! ಭಾಗ - 1 "ಅವರವರ ಭಾವಕ್ಕೆ, ಅವರವರ ಭಕುತಿಗಂ" (ಇದೊಂದು ಕಾಲ್ಪನಿಕ ಕಥೆಯಾಗಿದ್ದೂ, ಯಾವುದೇ ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ್ದಲ್ಲ. ಹಾಗೂ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯವಷ್ಟೇ) ಮಲೆನಾಡಿನ ಸಾಲು ಸಾಲು ಗುಡ್ಡಗಳ ಅಂಚಿನಲ್ಲಿ ಒಂದು ಚಿಕ್ಕ ಹಳ್ಳಿ 'ರುದ್ರಪಾದ'. ಪೇಟೆಯಿಂದ ಸ್ವಲ್ಪ ದೂರದ ಹಳ್ಳಿ. ರಸ್ತೆಗಳೂ ಅಷ್ಟಕ್ಕಷ್ಟೇ. ಆದರೂ, ವಾಹನ ಗಳ ಓಡಾಟಕ್ಕೆ ತೊಂದರೆ ಇಲ್ಲ. ಊರಿಗೆ ದಿನಕ್ಕೆ ಎರಡು ಬಸ್ಸುಗಳೂ ಬರುತ್ತವೆ. ನಾನು ಹೇಳ ಹೊರಟಿರುವ ಕಥೆ, ಈ ರುದ್ರಪಾದದಿಂದ ಒಳಕ್ಕೆ 2 ಕಿಲೋಮೀಟರ್ ದೂರದಲ್ಲಿರುವ 'ಕಾಡುತೋಟ'ದಲ್ಲಿ ಪ್ರಾರಂಭ ವಾಗುತ್ತದೆ. ನಮ್ಮ ಮಲೆನಾಡಿನಲ್ಲೇ ಹೀಗೆ 2 - 3 ಮನೆಗೇ ಒಂದೊಂದು ಹೆಸರುಗಳು. ಉದಾಹರಣೆಗೆ, ನನ್ನ ಅಜ್ಜನಮನೆ 'ಅರಸೀತೋಟ'. ಆದರೇ ಅಲ್ಲೇ ಒಂದು ತೋಟ ದಾಟಿದರೆ ಸಿಗುವ ಮನೆಗೆ 'ಗೋಳೀಮನೆ' ಅಂತ ಹೆಸ್ರು. ಕಾಡುತೋಟ ಹೆಸರಿನಂತೆಯೇ ಕಾಡುಗಳಿಂದಲೇ ಸುತ್ತುವರೆದಿರುವ ಊರು. ಅಲ್ಲದೇ ಈ ಕಾಡುತೋಟದಲ್ಲಿರೋದೇ 3 ಮನೆ. ಒಂದು ನಾರಾಯಣಯ್ಯನವರ ಮನೆ. ಕಾಡುತೋಟದ ಹೆಚ್ಚಿನ ತೋಟ, ಗದ್ದೆಗಳು ಇವರದೇನೇ. ಇನ್ನ ಉಳಿದೆರಡು ಮನೆ ಇವರಲ್ಲಿಗೇ ಕೆಲಸಕ್ಕೆ ಬರುವ ಮಾರ ಮತ್ತೆ ವೀರನವು. ನಾರಯಣಯ್ಯರೇ ಹೇಳುವಂತೆ, ಅವರಿಗೇ ಸುಮಾರು 12 ವರ್ಷವಿದ್ದಾಗ ಅವರ ತಂದೆ ಜೊತೆ ಕಾ...