Posts

Showing posts from November, 2017

ಇಡ್ಲಿ, ಚಟ್ನಿ ಮತ್ತು ಮಾತೃಪ್ರೇಮ ...!!!

Image
​ ಇಡ್ಲಿ, ಚಟ್ನಿ ಮತ್ತು ಮಾತೃಪ್ರೇಮ ...!!! ಕಂಡ ಘಟನೆಯಾ ಕಥೆಯಾಗಿಸುವಾ ಕೆಲಸ... ಮಾಮೂಲಿಯಂತೆ ಇವತ್ತೂ ಕೂಡ ಬೆಂಗಳೂರಿನ ವಿ.ವಿ.ಪುರಂ ನ ತಿಂಡಿಬೀದಿ (chat street) ನ 'ಬೈಟು ಕಾಫಿ' ಹೋಟೆಲ್ ನಲ್ಲಿ ಇಡ್ಲಿ, ಚಟ್ನಿ ತಿಂದು ಅರ್ಧ ಕಾಫಿ ಹೀರ್ತಾ, ಫೇಸ್ಬುಕ್ ನ್ಯೂಸ್ ಫೀಡ್ ನೋಡ್ತಾ ಇದ್ದಾಗ ಯಾವುದೋ ಒಂದು ಪೋಸ್ಟ್ ನೋಡಿ ಕೆಲವು ದಿನಗಳ ಹಿಂದಿನ ನೆನಪಿನ ಪುಟವೊಂದು ತೆರೆಯಿತು. ಇಡ್ಲಿ, ಚಟ್ನಿ ಎಫೆಕ್ಟೋ ಅಥವಾ ಕಾಫಿ ಎಫೆಕ್ಟೋ ಟಿ.ಎನ್. ಸೀತಾರಾಂ ಅವರ ಕಾಫಿ ತೋಟಕ್ಕೆ ಹೋದಾಗ ನೆಡೆದ ಒಂದು ಘಟನೆ ನಿನಪಾಯಿತು. ಅಯ್ಯೋ ಸೀತಾರಾಂ ಅವರ ಕಾಫಿತೋಟ ಅಂದರೇ ತೋಟ ಅಲ್ಲಾ ಮಾರ್ರೆ, ಗೌರಿಬಿದನೂರಲ್ಲಿ ಕಾಫಿತೋಟ ಎಲ್ಲಿಂದ ಬರಬೇಕು? ಅವರ ನಿರ್ದೇಶನದ ಹೊಸ ಚಲನಚಿತ್ರ "ಕಾಫಿತೋಟ" ನೋಡೋಣ ಅಂತ ನಾನು ನನ್ನ ಗೆಳೆಯವೃಂದ ಮನೋಜ, ಶಿಲ್ಪ, ಮನೀಷ್, ಅವತ್ತು ನಿರ್ಧರಿಸಿ. ನನಗೆ ಹತ್ತರವಾದ ಚಾಮರಾಜಪೇಟೆಯ ಉಮಾ ಥಿಯೇಟರ್ ಗೆ ಬೆಳಿಗ್ಗೆ 10:15 ಶೋ ಗೆ ಬರಲಿಕ್ಕೆ ಒಪ್ಸಿದ್ದು ಆಯ್ತು. ಅವತ್ತು ನಾನು ನನ್ನ ನಿತ್ಯಕರ್ಮಗಳನ್ನ ಮುಗಿಸಿ ನನ್ನ ರೂಢಿಯಂತೆಯೇ ಒಂದರ್ಧ ಗಂಟೆ ಮುಚಿತವಾಗಿ ಹೊರಟೆ. ಅವರ್ಯಾರೂ ಇನ್ನೂ ಬಂದಿರಲಿಲ್ಲ, ಮತ್ತೇ ಥಿಯೇಟರ್ ಕೂಡಾ ತೆಗೆದಿರಲಿಲ್ಲ. ನಾನು ಅಲ್ಲೇ ಕಲ್ಲು ಬೆಂಚಿನ ಮೇಲೆ ಕೂತು ಮೊಬೈಲ್ ನೋಡ್ತಾ ಇದ್ದೆ.  ಆಗಲೇ ಅಲ್ಲಿ 3 ಜನ ಏನೋ ಕಾರಣಕ್ಕೆ ಜಗಳ ಮಾಡ್ತಾ ಇದ್ದುದ್ದು ನೋಡ್ದೆ. ಸ್ವಲ್ಪಹೊತ್ತು ಅವರನ...