"ಯಕ್ಷಗಾನ" ನಮಗಿಷ್ಟು ಗೊತ್ತು...
"ಯಕ್ಷಗಾನ" ನಮಗಿಷ್ಟು ಗೊತ್ತು... "YAKSHAGAANA" we know this much... ಚಂಡೆಯ ನಿನಾದ ... ಭಾಗವತರ ಪದ ... ಕಲಾವಿದರ ಕುಣಿತ ನೋಡಲು ಎರಡು ಕಣ್ಣು ಸಾಲದು. 'ಗಂಡುಕಲೆ' ಎಂದೇ ಪ್ರಸಿದ್ಧವಾಗಿರುವ ಈ ಒಂದು ಕಲಾ ಪ್ರಾಕಾರ ಹೆಚ್ಚಾಗಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಯಕ್ಷಗಾನದಲ್ಲಿ ಸಾಮಾನ್ಯವಾಗಿ ೨ ವಿಧ : ೧. ತೆಂಕು ತಿಟ್ಟು : ಈ ವಿದದ ಯಕ್ಷಗಾನ ಸಾಮಾನ್ಯವಾಗಿ ದಕ್ಷಿಣ ಕನ್ನಡ, ಕಾಸರಗೋಡು, ಸಂಪಾಜೆ, ಮತ್ತು ಉಡುಪಿಯ ಕೆಲ ಭಾಗ ಗಳಲ್ಲಿ ಕಾಣಬಹುದು. ೨. ಬಡಗು ತಿಟ್ಟು : ಈ ವಿಧದ ಯಕ್ಷಗಾನವನ್ನ ಸಾಮಾನ್ಯವಾಗಿ ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಬಹುದು. ಯಕ್ಷಗಾನಕ್ಕೆ ಮೆರುಗು ಅವರ ವೇಷ ಭೂಷಣ, ಕುಣಿತ, ಭಾಗವತರ ಪದ, ಮತ್ತು ಚಂಡೆಯ ಶಬ್ದ. ತೆಂಕು ತಿಟ್ಟು ಹಾಗೂ ಬಡಗು ತಿಟ್ಟು ಎರಡರಲ್ಲೂ ವೇಷಭೂಷಣದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಅದರ ಬಗ್ಗೆ ತಿಳಿಯದವರಿಗೆ ವ್ಯತ್ಯಾಸ ಗುರುತಿಸಿಸೋದು ಕಷ್ಟವೇ. ಭಾಗವತರೂ ಪದ ಹಾಡುವುದರ ಜೊತೆಗೆ ತಾಳ ಇಲ್ಲವೇ ಜಾಗಟೆ ಭಾರಿಸುವುದು ವಿಶೇಷ. ಜೊ...