ಹಾಸ್ಟೆಲ್ ಕಥೆಗಳು - ೧
ಈ ದಿನ ನನ್ನ ಮನಸಲಿ ... ಬೇಸರ ಮುಸುಕಿದ ವಾತಾವರಣ ...!!! ಅದೇಕೋ ಗೊತ್ತಿಲ್ಲ, ಇವತ್ತು ಮನಸಲಿ ಬೇಸರ ಮುಸುಕಿದ ವಾತಾವರಣ. ಕೆಲವೇ ಕೆಲವು ದಿನಗಳ ಹಿಂದಷ್ಟೇ, ನವೇ ಸೀನಿಯರ್ಗಳು ಎಂದು ಖುಷಿಯಲ್ಲಿದ್ದೆವು . ಇವಾಗಿರೋ ಸೀನಿಯರ್ ಎಲ್ಲಾ ಯಾರೂ ಇರಲ್ಲ, ಇನ್ಮೆಲೇ ನಾವೇ ಎಲ್ಲಾ, ನಮ್ಮಿಂದನೇ ಎಲ್ಲಾ, ಅನ್ಕೊಂಡಿದ್ವಿ. ಆದ್ರೇ ಇವತ್ತು ನಮ್ಮ ಸೀನಿಯರ್ ಗಳು ಒಬ್ಬಬ್ರೇ ಹಾಸ್ಟೆಲ್ ಬಿಡ್ತಾ ಇದ್ದರೇ, ಮನಸಲ್ಲಿ ಯಾರನ್ನೋ ಕಳಕೊಂಡ ಅನುಭವ. ಅವರ ಮತ್ತು ನಮ್ಮ ನಡುವಿನ ಅಟ್ಯಾಚ್ಮೆಂಟೋ, ಅಥವಾ ನಮಗೂ ಈ ಹಾಸ್ಟೆಲ್ ನ ಋಣ ಇನ್ನಾ ಒಂದೇ ವರ್ಷ ಅಂತಲೋ ಗೊತ್ತಿಲ್ಲಾ, ಎಷ್ಟೇ ಪ್ರಯತ್ನಿಸಿದರೂ ನನ್ನ ಮನಸಿನ ದುಗುಡ ಕರಗುತ್ತಿಲ್ಲ. ಎಲ್ಲೆಲ್ಲೋ ಇದ್ದವರು ಇಲ್ಲಿ ಒಂದಗಿಹೆವು... ಇದುವೆ ನಮ್ಮ ಮನೆಯೆಂದು, ನಾವಂದುಕೊಂಡಿಹೆವು...|| ಸ್ನೇಹ - ಪ್ರೀತಿಯಾ ಮೀರಿದಾ ಬಂಧವಿದು ... ಅನುಬಂಧದ ಈ "ಅನರ್ಘ್ಯ" ಕೊಂಡಿ ಎಂದೂ ಕಳಚದು ...|| ಹೌದು, ಯಾರದ್ದೂ ಯಾವೂರು ಗೊತ್ತಿರಲಿಲ್ಲ. ಇಲ್ಲಿ ಬಂದೆವು, ಇವರನ್ನ ಅಣ್ಣಾ ಎಂದು ಕರೆದೆವು. ಸ್ವಂತ ಅಣ್ಣಂದಿರಿಗಿಂತಾ ಇವರನ್ನೇ ನೆಚ್ಚಿಕೊಂಡಿದ್ದೆವು. ಅದ್ಯಾಕೋ ಕಳೆದ ವರ್ಷ ಸೀನಿಯರ್ಸ್ ಬಿಡುವಾಗ ಹೀಗೆ ಬೇಜಾರಿರಲಿಲ್ಲ. ನಮಗೂ ಅವರಿಗೂ ಅಷ್ಟು...