Posts

Showing posts from December, 2019

ಮಾಟಗಾತಿಯ ಜೀಪಿನಲಿ ಭಾಗ - 2

Image
"ನರ ಬಲಿ...!!!" ಭಯದ ನೆರಳಲ್ಲಿ... (ಇಲ್ಲಿಯವರೆಗೆ : ಸಕಲೇಶಪುರಕ್ಕೆ ಪ್ರವಾಸ ಹೊರಟ ನಾವು, ಮಲ್ಲಳ್ಳಿ ಜಲಪಾತ ಮತ್ತು ಪುಷ್ಪಗಿರಿಯ ಸೊಬಗ ಸವಿದು, ಹಿಂದಿರುಗಿವಾಗ ದಾರಿ ತಪ್ಪಿದ್ದಲ್ಲದೆ, ಕಾರು ಸ್ಟಾರ್ಟ್ ಆಗದೇ, ಅಲ್ಲೇ ಮಲಗಲನುವಾಗಿದ್ದಗ ಜೀಪಿನ ಸದ್ದನ್ನು ಕೇಳಿ ಎಲ್ಲರೂ ಎದ್ದು ಕಾದು ಕುಳಿತಿದ್ದಾಗಿತ್ತು)   ಜೀಪು ದೂರದ ತಿರುವಿನಲ್ಲಿ ಬರ್ತಾ ಇದ್ದಿದ್ದು ಕಾಣ್ತಾ ಇತ್ತು. ಹಳೆಯ ಮಾಡೆಲ್ ಗಾಡಿ. ಸುಮಾರು 1997-98 ರ ಮಾಡೆಲ್ ಇರ್ಬೋದು. ಮಿಲಿಟರಿ ಜೀಪು ಅದು. ಜೀಪಿನ ಹೆಡ್ಲೈಟ್ ಬೆಳಕು ನಮ್ಮ ಕಡೆಗೇ ಬರ್ತಾ ಇದೆ. ಆ ಜಲ್ಲಿ ದಾರಿಯಲ್ಲೂ 40-50 ಕಿಲೋಮೀಟರ್ ಓಟದಲ್ಲಿ ಬಂದು ನಮಗೆ ಸ್ವಲ್ಪೇ ಸ್ವಲ್ಪ ದೂರದಲ್ಲಿ ನಿಂತಿತು. ಆ ಓಟದಲ್ಲಿದ್ದ ಜೀಪು ಸರಕ್ಕನೆ ಬ್ರೇಕು ಹಾಕಿದ್ದರ ಪರಿಣಾಮ, ಚಕ್ರದ ತುದಿಗೆ ಸಿಕ್ಕ ಜಲ್ಲಿ ಕಲ್ಲುಗಳು ಹಾರಿ, ಘಾಟಿಯ ಕೆಳಗಡೆ ಬೀಳುವ ಸದ್ದು ಕೇಳಿಸ್ತು.   ಅರೆ, ಗಾಡಿ ಓಡುಸ್ತಾ ಇರೋದು ಒಂದು ಹೆಂಗಸು. ನೋಡಲು ಹಿಡಿಂಬಾ ಗಾತ್ರ. ಸುಡುವ ಕೆಂಗಣ್ಣುಗಳು. ಕಡುಗಪ್ಪು ಬಣ್ಣದ ಬಟ್ಟೆಯನ್ನು ಉಟ್ಟಿದ್ದಾಳೆ. ಹಣೆಯ ಮೇಲೆ 10 ರೂಪಾಯಿ ನಾಣ್ಯದಷ್ಟು ಅಗಲದ ಕುಂಕುಮ.ಗಂಟಿಕ್ಕಿದ, ಸಿಡುಕು ಮುಖ. ಸಾಮಾನ್ಯ 6 ಅಡಿಯ ಎತ್ತರ ಮತ್ತು ನೂರರಿಂದ ನೂರಿಪ್ಪತ್ತು ಕೆಜಿ ತೂಗಬಹುದು ( ನಿಮ್ಮ ಕಲ್ಪನೆಗೆ ಹೇಳಿದ್ದಷ್ಟೇ). ಆ ಹೆಂಗಸಿನ ಪಕ್ಕದ ಸೀಟಿನಲ್ಲಿ ಒಬ್ಬ ಅಜ್ಜ. ಸುಮಾರು 70 ವರ್ಷ ದಾಟಿದ ಮುದುಕ. ಬ...

"ಮಾಟಗಾತಿಯ ಜೀಪಿನಲಿ" ಭಾಗ - 1

Image
"ಕೈಕೊಟ್ಟ ಕಾರು..!!" ಮುಂದಿನ ನಿಲ್ದಾಣ, 'ಸಕಲೇಶಪುರ'.  ಅವತ್ತು ಸಾಲು ಸಾಲು ರಜ ಇದ್ದಿದ್ರಿಂದಾ ಫ್ರೆಂಡ್ಸೆಲ್ಲಾ ಸೇರಿ ಒಂದೊಳ್ಳೇ ಟ್ರಿಪ್ ಮಾಡೋ ಮನಸ್ಸಾಗಿ, ಬಂಗಳೂರಿನಿಂದ ನೂರಾರು ಕಿಲೋಮೀಟರ್ ದೂರದ ಸಕಲೇಶಪುರಕ್ಕೆ ಗಾಡಿ‌ ತಿರ್ಸಿ ಆಗಿತ್ತು. ಅಲ್ಲಿನ ರೈಲು ಹಾದಿಯ ಚಾರಣಕ್ಕೆ ಅಣಿಯಾಗಿದ್ವಿ. ಆ ರೈಲುದಾರಿಯ ಚಾರಣ ಅನಧಿಕೃತವಾದ್ರೂ, ಅದೇನೋ ಹುಮ್ಮಸ್ಸು. ಗೆಳೆಯನ ಹೊಸ ಕಾರು ರೆಡಿ ಇದ್ದ ಕಾರಣ, ಬೆಳಗಿನ ಜಾವ ನಾಲ್ಕರ ಸುಮಾರಿಗೆ ಹೊರಡುವ ನಿರ್ಧಾರ ಮಾಡಿಯಾಗಿತ್ತು. ಆದ್ರೇ ಗಾಡಿಯ ಕೆಪಾಸಿಟಿ ಐದು, ನಾವಿದ್ದಿದ್ದು ಆರು. ಹೇಗೆ ಹೋಗೋದು?   ಎಂಜಿನಿಯರಿಂಗ್ ಮುಗಿಸಿ, ಸಾಫ್ಟ್‌ವೇರ್ ಕೆಲಸ ಹಿಡಿದಿದ್ದ ಎಲ್ಲರೂ, ಆ ಕಂಪ್ಯೂಟರ್ ನ ಮುಂದೆ ಕೂತು, ಕೂತು, ಕುರ್ಚಿ ಬೆಚ್ಚಗೆ ಮಾಡಿದ್ದಷ್ಟೇ ಅಲ್ಲ, ಆ ಏಸಿ ಗಾಳಿಗೆ, ಬೆವರು ಬಾರದೇ, ತಿಂದಿದ್ದು ಕರಗದೇ, ಹೊಟ್ಟೆ ಗಿರಿಧರ ಉಡುಪರು ಬಾರ್ಸೋ ಘಟಂ ನಂತೆ ಆಗಿದ್ದಿತು.   "ಏ ಅಡ್ಜಸ್ಟ್ ಮಾಡ್ಕೋಳಣಾ ಬಿಡ್ರೋ.." ಎಂದವನೇ ನೂತನ್ ಆಚಾರಿ.   ಆದ್ರೇ ಮ್ಯಾಟರ್ ಏನಂದ್ರೇ, ಅವತ್ತಿನ ದಿನ ಬೆಳಿಗ್ಗೆ ಹೊರಟಿದ್ದೇ ಐದು ಜನ. ನಮ್ ಗ್ಯಾಂಗಲ್ಲಿ ಕೈ ಕೊಡಕ್ಕೇ ಹೆಸರುವಾಸಿಯಾಗಿದ್ದ ಆಚಾರಿನೇ ಅವತ್ ಕೈ ಎತ್ತಿದ್ದ. ಅವ್ನು ಅವತ್ ಅಡ್ಜಸ್ಟ್ ಮಾಡ್ಕೊಳಣಾ ಅಂದಾಗ್ಲೇ ನಾವ್ ಯೋಚ್ನೇ ಮಾಡ್ಬೇಕಿತ್ತು. ಬಿಡಿ ಟ್ರಿಪ್ಪು ಅಂದ್ಮೇಲೆ ಯಾರಾದ್ರೂ ಕೈ ಕೊಡ್ಬೇಕಲಾ. ...