"ನನ್ ಲೈಫಲ್ ಒಂದಿನ" ಭಾಗ - 2
ಯಾರ್ ಯಾರ್ ಜೀವನ ಹೇಗೇಗೆ ಅಂತ ಹೇಳಕ್ಕಾಗಲ್ಲ...!!! ಭಾಗ - 2 ನ ಮಗೆಲ್ಲಾ ಅನೌನ್ ನಂಬರ್ ಕಾಲ್ ಬಂದರೇ ಯಾರದು ಅಂತಾ ಹುಡುಕುವ ಒಂದು ಚಟ ಇರತ್ತೆ. ಹಾಗೇ ನೋಡೋಣ ಎಂದು ವಾಪಾಸ್ ಕಾಲ್ ಮಾಡಿದೆ. ಅತ್ತಕಡೆ ಬರೀ ರಿಂಗ್ ಆಯ್ತು ಆದ್ರೇ ಎತ್ತಲಿಲ್ಲ. ಮತ್ತೆ ಪ್ರಯತ್ನ ಮಾಡ್ದೆ. ಈ ಬಾರಿ ಹಾಗಾಗಲಿಲ್ಲ, ಆ ಕಡೆಯಿಂದ "ಹೆಲೋ" ಎಂಬ ಅವಳ ಸುಮಧುರ ಧ್ವನಿ ಕೇಳಿಸ್ತು. ಆ ಧ್ವನಿಗೇ ನನ್ನ ಮನಸಲ್ಲಿ ಒಮ್ಮೆಗೆ ಆ ಹುಡುಗಿಯ ಮುಖವನ್ನು ನೋಡಲೇಬೇಕು ಎನಿಸಿದ್ದು ಸುಳ್ಳಲ್ಲ. ಇದು ಪ್ರೀತಿ ಅಲ್ಲ ಬೇರೆ ಒಬ್ಬಳು ಅನ್ನೋದು ಕನ್ಫರ್ಮ್ ಆಗಿತ್ತು. ಆದರೇ ಏನ್ ಮಾಡೋದು ಸ್ವಾಮಿ ಈಗಾಗಲೇ ನಿಶ್ಚಿತಾರ್ಥ ಆಗಿದೆ. ಈಗ ಮತ್ತೊಂದು ಹುಡುಗೀನಾ ಅಂತ. ಏನೋ ಧೈರ್ಯ ಮಾಡಿ 'ಯಾರು?' ಎಂದು ಕೇಳಿದೆ. ಆ ಕಡೆಯಿಂದ 'ನಾನು ರಷ್ಮಿ, ನಿಮ್ಮನ್ನ ಅವತ್ತು ಆಫೀಸಿನಲ್ಲಿ ನೋಡಿದ್ದೇ. ಒಮ್ಮೆ ಮೀಟ್ ಮಾಡೋಣ್ವಾ?' ಎಂದು ಕೇಳಿದಳು. ಬರೀ ಮೀಟ್ ತಾನೇ, ಬೇರೆ ಏನು ಅಲ್ಲಾ ಅನ್ಕೊಂಡು ಒಂದು ಹುಂಬು ಧೈರ್ಯ ಮಾಡಿ ಆಗಲಿ ಎಂದು ಅವಳು ಹೇಳಿದ ಜಾಗಕ್ಕೆ ಬರ್ತೀನಿ ಅಂತ ಒಪ್ಪ್ಕೊಂಡೆ. ಮೀಟ್ ಏನೋ ಆದ್ವಿ. ಆದರೇ ಅದೇನೋ ಗೊತ್ತಿಲ್ಲ ಅವಳ ಮಾತುಗಳು, ನಗು, ಕಣ್ಣು ಎಲ್ಲವೂ ನನ್ನನ್ನ ಆಕರ್ಷಿಸಿದವು. ಒಮ್ಮೆಗೆ ನಿಶ್ಚಿತಾರ್ಥ ಆಗ...