Posts

Showing posts from December, 2018

ತ್ರಿಶಂಕು ನರಕ

Image
"ತ್ರಿಶಂಕು ನರಕ " ಮಲೆನಾಡು ಹುಡುಗನ ಮಾರೆಲ್ ಸ್ಟೋರಿ...!!!         ಬೆಂ ಗಳೂರು, ಇದೊಂದು ಮಾಯಾನಗರಿ. ಈ ಊರಿನ ವಿಶೇಷತೆಯೋ ಏನೋ ಗೊತ್ತಿಲ್ಲ, ಬೆಂಗಳೂರು ಯಾವತ್ತೂ ಯಾರನ್ನೂ ಹಸಿವಿನಿಂದ ಮಲಗಿಸಲ್ಲ. ಏನಿಲ್ಲವೆಂದರೂ, ಪ್ರತಿದಿನದ ಊಟ ಹುಟ್ಟಿಸಿಕೊಳ್ಳಲು ಇಲ್ಲಿ ಅಡೆತಡೆಗಳಿಲ್ಲ ಎಂದೇ ಹೇಳಬಹುದು. ಕೆಲಸ ಮಾಡುವ ಹುಮ್ಮಸ್ಸಿದ್ದರೆ ದುಡಿಮೆಗೆ ತಡೆಗೋಡೆಯಿಲ್ಲ. ಸ್ವಲ್ಪ ಜಾಸ್ತಿ ದುಡಿದರೆ, ಬಾಡಿಗೆ ಮನೆಗಳೂ ಲಭ್ಯ. ಇಲ್ಲವಾದಲ್ಲಿ ಬ್ಯಾಚುಲರ್ ರೂಮುಗಳಲ್ಲೇ 5-6 ಜನ ವಾಸಿಸುವುದನ್ನೂ ಕಂಡಿದ್ದೇನೆ. ಇನ್ನೂ ಸ್ವಲ್ಪ ಜಾಸ್ತಿ ಹಣ ಹರಿದಾಡಿದಲ್ಲಿ 1BHK, 2BHK ಮನೆಗಳೂ ಸಿಕ್ಕುವುದು. ಕೊನೆಯ ಪಕ್ಷ ಯಾವೂದೂ ಸಿಗದಿದ್ದರೇ, ಬಸ್ಸುಸ್ಟಾಂಡ್, ಪಾರ್ಕುಗಳೂ ಇವೆ.    ಇಷ್ಟೆಲ್ಲಾ ಇದ್ದರೂ, ಈ ಬ್ರಹ್ಮಚಾರಿಗಳ ಜೀವನ ದೇವರಿಗೇ ಪ್ರೀತಿ. ಅವರ ಸ್ಥಿತಿ ಮಾತ್ರಾ ಯಾರಿಗೂ ಬೇಡ. ಬ್ರಹ್ಮಚಾರಿಗಳಿಗೆ ಮನೆಯ ಬಾಡಿಗೆ ನೀಡಲೇ ಎಲ್ಲರೂ ಹೆದರುತ್ತಾರೆ. ಕಾರಣಗಳೂ ಬಹಳಷ್ಟಿವೆ ಹಾಗಿರಲಿ. ಆದರೇ ಅದೆಷ್ಟೇ ದುಡಿದರೂ ಸ್ವಂತ ಜಾಗದಲಿ, ಸ್ವಂತ ಮನೆ ಕನಸಿನ ಮಾತೇ. ಕಾರಣವಿಷ್ಟೇ, ಮನೆಕಟ್ಟಲು ಜಾಗವೆಲ್ಲಿದೆ ಸ್ವಾಮಿ ಈ ಸಿಲಿಕಾನ್ ಸಿಟಿಯಲ್ಲಿ?    ಅದೇನೋಪಾ, ಮನೆ ಮೇಲೆ ಮನೆಯಂತೆ, ಅದರಮೇಲೆ ಮತ್ತೊಂದು ಮನೆಯಂತೆ. ನೆಲದಮೇಲೆ ರೋಡಂತೆ, ಅದರ ಮೇಲೆ ಮತ್ತೊಂದು ರೋಡಂತೆ. ಅವೆಲ್ಲದರ ಮೇಲೆ ರೈಲಂತ...