ನಾ ಕಂಡಂತೆ ನನ್ನೂರು ಭಾಗ - 4
"ದೀಪೋಳ್ಗೇ... ದೀಪ್ ದೀಪೋಳ್ಗೇ..." " ಸೂವಿರೋ ಸಂಗಯ್ಯಾ, ಸೂವೀರೋ ಲಿಂಗಯ್ಯಾ... ಸೋಬಾಂದಲಿ ಬಾರೋ ಬಸವಯ್ಯಾ... ದೀಪೋಳೀಗೇನ್ನೀರೋ.. ನಮ್ಮೂರ ದ್ಯಾವ್ರಿಗೇ ... ನಮ್ಮೂರಾ ದ್ಯಾವ್ರಿಗೇ, ಏನೇನೂ ಪೂಜಾವೋ... ಏನೇನೂ ಪೂಜಾವೋ, ಹಾಲಣ್ಣು ಪೂಜಾವೋ... ದೀಪೋಳೀಗೇನ್ನೀರೋ.. ನಮ್ಮೂರ ದ್ಯಾವ್ರಿಗೇ ... " ಅರೆ ಏನಪ್ಪಾ ಇದು ಅನ್ಕೊಂಡ್ರಾ? ನಮ್ ಮಲ್ನಾಡ್ ಭಾಗದೋರಿಗೆ ಇದೇನ್ ವಿಶೇಷ ಅಲ್ಲ ಬಿಡಿ. ಕಾರಣ, ಈ ದೀಪಾವಳಿ ಬಂತು ಅಂದ್ರೇ ಅಂಟಿಕೆ ಪಂಟಿಕೆ ಸದ್ದು ರಾತ್ರಿಯೆಲ್ಲಾ ಕೇಳೋದೇ. ಇದು ನಮ್ಮ ಮಲೆನಾಡಿನ ಪದ್ದತಿ. ದೀಪಾವಳಿ ಸಮಯದಲ್ಲಿ ಊರಿನ ಮುಖ್ಯ ದೇವರಿಗೆ ಅಂದ್ರೇ ಗ್ರಾಮ ದೇವರ ದೇವಾಲಯದಲ್ಲಿ ಅಂಟಿಕೆ ಪಂಟಿಕೆ ತಂಡ ಕಟ್ಟುವ ಕೆಲಸ ನೆಡೆಯತ್ತೆ. ಹಾಗಾದ್ರೇ ಈ ಅಂಟಿಕೆ ಪಂಟಿಕೆ ಅಂದ್ರೇ ಏನು ? ಏನ್ ಮಾಡ್ತಾರೆ ಅಂತ ಯೋಚ್ನೇ ಮಾಡ್ತಾ ಇದಿರಾ?? ಇದು ನಮ್ಮ ಮಲೆನಾಡು, ಅದ್ರಲ್ಲೂ ತೀರ್ಥಹಳ್ಳಿ, ಕೊಪ್ಪಾ ಮತ್ತೇ ಶ್ರಿಂಗೇರಿ ಭಾಗಗಳಲ್ಲಿ ನೆಲೆ ನಿಂತರುವ ಒಂದು ಜಾನಪದ ಕಲೆ. ದೀಪಾವಳಿಯ ಮೊದಲ ದಿನದಿಂದ ಪ್ರಾರಂಭವಾಗಿ, ಹಬ್ಬದ ಮೂರೂ ದಿನ ರಾತ್ರಿ ಪೂರ್ತಿ ಊರಿನ ಯುವ ಸಮುದಾಯ ಈ ಅಂಟಿಕೆ ಪಂಟಿಕೆ ಯಲ್ಲಿ ಮಗ್ನವಾಗಿರತ್ತೆ. ಹಬ್ನದ ಮೊದಲ ದಿನ, ಗ್ರಾಮದೇವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿ, ಜ್ಯೋತಿ ಹಿಡಿದು ಹಾಡು ಶುರು ಮಾಡಿದ್ರೇ, ನಿಲ್ಲೋದು ಮಾರನೇ ದಿನ ಬೆಳಿಗ್ಗೇನೇ. ಒಬ್ರು ನಿಲ್ಸಿ...