"ಹೀಗೊಂದು ಪತ್ರ"
"ಹೀಗೊಂದು ಪತ್ರ" ಕಿತ್ತೊಗೆದ ಕರುಳ ಕುಡಿಯ ಕರುಣಾಜನಕ ಕಥೆ...!!! ಕ್ಷೇಮ ಶ್ರೀ ದಿನಾಂಕ: 31/03/19 ಪ್ರೀತಿಯ ಅಪ್ಪ, ಅಮ್ಮನಿಗೆ.. ಉಭಯ ಕುಶಲೋಪರಿ ಸಾಂಪ್ರದಾ. ನಾನಿಲ್ಲಿ ಕ್ಷೇಮ , ಒಂದು ರೀತಿಯಲಿ ಹೇಳಬೇಕೆಂದರೆ ಅಲ್ಲಿಗಿಂತಲೂ ಕ್ಷೇಮ. ನೀವೂ ಕ್ಷೇಮವೆಂದು ಭಾವಿಸುತ್ತೇನೆ. ನಿಮ್ಮ ಕ್ಷೇಮ, ಸಮಾಚಾರಗಳಿಗೆ ಪತ್ರ ಬರೆಯಿರಿ ಎನ್ನಲು ನನ್ನ ವಿಳಾಸಕ್ಕೆ ಪತ್ರ ತಲುಪಿಸಲು ಯಾವೊಂದು ಅಂಚೆ ಕಛೇರಿಯೂ ಇಲ್ಲವೆಂದು, ನಿಮಗೂ ತಿಳಿದಿದೆಯೆಂದು ಭಾವಿಸುತ್ತೇನೆ. ಬಹುಶಃ ನನಗೆ ತಿಳಿದ ಮಟ್ಟಿಗೆ, ನನ್ನಷ್ಟು ಚಿಕ್ಕ ವಯಸ್ಸಿಗೇ ಪತ್ರ ಬರೆಯುವ ಬುದ್ದಿ ಮತ್ತು ಕೌಶಲ್ಯ ಯಾವ ಮಗುವಿಗೂ ಇದ್ದಿರಲಿಕ್ಕಿಲ್ಲ. ಆದರೇ ಅದರಿಂದ ಆದ ಪ್ರಯೋಜನ? "ಇಷ್ಟು ಚಿಕ್ಕ ವಯಸ್ಸಿಗೇ ಅಸಮಾನ್ಯ ಶಕ್ತಿ, ಹೇಗೆ? ಈ ಮಗುವಿನ ಹಿಂದಿನ ಜನ್ಮ ರಹಸ್ಯವಾದರೂ ಏನು ? ಇಲ್ಲಾ ಇದು ದೇವರ ಪವಾಡವೆನು ? ನೋಡಿ 'ಅಸಮಾನ್ಯ ಪವಾಡ' " ಎಂದು ವಾರ್ತಾ ವಾಹಿನಿಗಳಲ್ಲಿ ಸುದ್ದಿ ಪ್ರಕಟಿಸುವಂತೆ ಮಾಡಲು, ಅವರ TRPಗೆ ಕಾರಣವಾಗಲು, ನೀವಿಬ್ಬರು ಇಂದು ಒಟ್ಟಿಗೇ ಇದ್ದರಲ್ಲವೇ ? ಅಪ್ಪಾ..., ಅಮ್ಮನ ಮೊದಲ ನಗೆ...