Posts

"ತೆಲುಗು ತಾತ"

Image
 "ತೆಲುಗು ತಾತ" ಶ್ರಮಜೀವಿಯ ಜೀವನ...!    ಈ ಜಗತ್ತೇ ಹೀಗೆ, ತನ್ನ ಹಸಿವನ್ನ ತಣಿಸಿಕೊಳ್ಳಲು, ಬೇರೆಯವರ ಹಸಿವನ್ನು ನೀಗಬೇಕಾಗ್ತದೆ. ಒಂದ್ ಉದಾಹರಣೆ ನೋಡೋಣ. ನೀವು ಹೋಟ್ಲಿಗೆ ಹೋಗ್ತೀರಿ, ಒಂದ್ ದೋಸೆ ತಿಂತೀರಿ ಅನ್ಕೋಳಿ. ಆಗ ನಿಮ್ಮ ಹೊಟ್ಟೆ ಹಸಿವು ನೀಗತ್ತೆ. ನಾವ್ ಕೊಡೋ ಹಣದಿಂದ ಆ ಹೋಟೆಲ್ ಮಾಲಿಕನ ಮತ್ತು ಅಲ್ಲಿ ಕೆಲಸ ಮಾಡೋರ ಹಸಿವು ನೀಗತ್ತೆ. ಹಾಗೇ ಹೋಟೆಲ್ ಲಿ ಅಡ್ಗೆ ಮಾಡಕ್ಕೇ ದಿನಸಿ, ತರಕಾರಿಗಳೂ ಯಾರೂ ಪುಗಸಟ್ಟೆ ಕೊಡಲ್ಲ. ಹಾಗಾಗಿ ಅದ್ರಿಂದ ದಿನಸಿ ಅಂಗಡಿ ಮಾಲಿಕನ ಮತ್ತೆ ಬೆಳೆದ ರೈತನ, ಹೊತ್ತು ಅಂಗಡಿಗೆ ತಂದ ವಾಹನ ಮಾಲಿಕನ, ಎತ್ತಾಕಿದ ಕೂಲಿ ಕಾರ್ಮಿಕನ ಹೀಗೇ ಹಲವರ ಹಸಿವನ್ನ ತಣಿಸಿರತ್ತೆ. ಇಟ್ಸ್ ಎ ಹ್ಯೂಮನ್ ಫುಡ್ ಸೈಕಲ್‌.    ಇದೆಲ್ಲಾ ಹೊಟ್ಟೆ ಹಸಿವಿನ ವಿಚಾರವಾದರೇ, ಕೆಲವರಿಗೆ ಜ್ಞಾನದ ಹಸಿವು. ಇನ್ನು ಕೆಲವರಿಗೆ ದೇಹ ಹುರಿಗೊಳಿಸಿವ ಹಸಿವು. ಕೆಲವರಿಗೆ ಮನೋರಂಜನೆಯ ಹಸಿವಾದರೇ, ಕೆಲವರಿಗೆ ಕಾಮದ ಹಸಿವು. ಹಸಿವ ತಣಿಸುವುದೂ ಕೂಡ, ಮತ್ತೇ ತಮ್ಮ ಹಾಗೂ ತಮ್ಮವರ ಹಸಿವ ತಣಿಸಲೋಸುಗವೇ. ಆಯಾ ಹಸಿವಿಗೆ, ಆಯಾ ಜಾಗಕ್ಕೇ ಹೋಗಬೇಕು. ಹೊಟ್ಟೆಯ ಹಸಿವ ತಣಿಸಲು ಶಾಲೆಯ ಗುರುವಿನ ಬಳಿ ಹೋದರೇ ಬಿಸಿಯೂಟದ ಊಟವನ್ನು ಒಂದೆರಡು ದಿನ ಕೊಟ್ಟಾರು ಅಷ್ಟೇ.    ಹಾಗೇ ಇನ್ನೊಂದು ವಿಷಯ ನೋಡಿ, ಹಸಿವು ಎಷ್ಟಿದೆಯೋ ಅಷ್ಟೇ ತಿನ್ನಬೇಕು. ಅತೀ ಆಸೆಯಿಂದಾ ಎಲ್ಲವೂ ನನಗೊಬ್ಬನಿಗೇ ಬೇಕು ಎಂದರೇ, ಅ...

ಮಾಟಗಾತಿಯ ಜೀಪಿನಲಿ ಭಾಗ - 2

Image
"ನರ ಬಲಿ...!!!" ಭಯದ ನೆರಳಲ್ಲಿ... (ಇಲ್ಲಿಯವರೆಗೆ : ಸಕಲೇಶಪುರಕ್ಕೆ ಪ್ರವಾಸ ಹೊರಟ ನಾವು, ಮಲ್ಲಳ್ಳಿ ಜಲಪಾತ ಮತ್ತು ಪುಷ್ಪಗಿರಿಯ ಸೊಬಗ ಸವಿದು, ಹಿಂದಿರುಗಿವಾಗ ದಾರಿ ತಪ್ಪಿದ್ದಲ್ಲದೆ, ಕಾರು ಸ್ಟಾರ್ಟ್ ಆಗದೇ, ಅಲ್ಲೇ ಮಲಗಲನುವಾಗಿದ್ದಗ ಜೀಪಿನ ಸದ್ದನ್ನು ಕೇಳಿ ಎಲ್ಲರೂ ಎದ್ದು ಕಾದು ಕುಳಿತಿದ್ದಾಗಿತ್ತು)   ಜೀಪು ದೂರದ ತಿರುವಿನಲ್ಲಿ ಬರ್ತಾ ಇದ್ದಿದ್ದು ಕಾಣ್ತಾ ಇತ್ತು. ಹಳೆಯ ಮಾಡೆಲ್ ಗಾಡಿ. ಸುಮಾರು 1997-98 ರ ಮಾಡೆಲ್ ಇರ್ಬೋದು. ಮಿಲಿಟರಿ ಜೀಪು ಅದು. ಜೀಪಿನ ಹೆಡ್ಲೈಟ್ ಬೆಳಕು ನಮ್ಮ ಕಡೆಗೇ ಬರ್ತಾ ಇದೆ. ಆ ಜಲ್ಲಿ ದಾರಿಯಲ್ಲೂ 40-50 ಕಿಲೋಮೀಟರ್ ಓಟದಲ್ಲಿ ಬಂದು ನಮಗೆ ಸ್ವಲ್ಪೇ ಸ್ವಲ್ಪ ದೂರದಲ್ಲಿ ನಿಂತಿತು. ಆ ಓಟದಲ್ಲಿದ್ದ ಜೀಪು ಸರಕ್ಕನೆ ಬ್ರೇಕು ಹಾಕಿದ್ದರ ಪರಿಣಾಮ, ಚಕ್ರದ ತುದಿಗೆ ಸಿಕ್ಕ ಜಲ್ಲಿ ಕಲ್ಲುಗಳು ಹಾರಿ, ಘಾಟಿಯ ಕೆಳಗಡೆ ಬೀಳುವ ಸದ್ದು ಕೇಳಿಸ್ತು.   ಅರೆ, ಗಾಡಿ ಓಡುಸ್ತಾ ಇರೋದು ಒಂದು ಹೆಂಗಸು. ನೋಡಲು ಹಿಡಿಂಬಾ ಗಾತ್ರ. ಸುಡುವ ಕೆಂಗಣ್ಣುಗಳು. ಕಡುಗಪ್ಪು ಬಣ್ಣದ ಬಟ್ಟೆಯನ್ನು ಉಟ್ಟಿದ್ದಾಳೆ. ಹಣೆಯ ಮೇಲೆ 10 ರೂಪಾಯಿ ನಾಣ್ಯದಷ್ಟು ಅಗಲದ ಕುಂಕುಮ.ಗಂಟಿಕ್ಕಿದ, ಸಿಡುಕು ಮುಖ. ಸಾಮಾನ್ಯ 6 ಅಡಿಯ ಎತ್ತರ ಮತ್ತು ನೂರರಿಂದ ನೂರಿಪ್ಪತ್ತು ಕೆಜಿ ತೂಗಬಹುದು ( ನಿಮ್ಮ ಕಲ್ಪನೆಗೆ ಹೇಳಿದ್ದಷ್ಟೇ). ಆ ಹೆಂಗಸಿನ ಪಕ್ಕದ ಸೀಟಿನಲ್ಲಿ ಒಬ್ಬ ಅಜ್ಜ. ಸುಮಾರು 70 ವರ್ಷ ದಾಟಿದ ಮುದುಕ. ಬ...

"ಮಾಟಗಾತಿಯ ಜೀಪಿನಲಿ" ಭಾಗ - 1

Image
"ಕೈಕೊಟ್ಟ ಕಾರು..!!" ಮುಂದಿನ ನಿಲ್ದಾಣ, 'ಸಕಲೇಶಪುರ'.  ಅವತ್ತು ಸಾಲು ಸಾಲು ರಜ ಇದ್ದಿದ್ರಿಂದಾ ಫ್ರೆಂಡ್ಸೆಲ್ಲಾ ಸೇರಿ ಒಂದೊಳ್ಳೇ ಟ್ರಿಪ್ ಮಾಡೋ ಮನಸ್ಸಾಗಿ, ಬಂಗಳೂರಿನಿಂದ ನೂರಾರು ಕಿಲೋಮೀಟರ್ ದೂರದ ಸಕಲೇಶಪುರಕ್ಕೆ ಗಾಡಿ‌ ತಿರ್ಸಿ ಆಗಿತ್ತು. ಅಲ್ಲಿನ ರೈಲು ಹಾದಿಯ ಚಾರಣಕ್ಕೆ ಅಣಿಯಾಗಿದ್ವಿ. ಆ ರೈಲುದಾರಿಯ ಚಾರಣ ಅನಧಿಕೃತವಾದ್ರೂ, ಅದೇನೋ ಹುಮ್ಮಸ್ಸು. ಗೆಳೆಯನ ಹೊಸ ಕಾರು ರೆಡಿ ಇದ್ದ ಕಾರಣ, ಬೆಳಗಿನ ಜಾವ ನಾಲ್ಕರ ಸುಮಾರಿಗೆ ಹೊರಡುವ ನಿರ್ಧಾರ ಮಾಡಿಯಾಗಿತ್ತು. ಆದ್ರೇ ಗಾಡಿಯ ಕೆಪಾಸಿಟಿ ಐದು, ನಾವಿದ್ದಿದ್ದು ಆರು. ಹೇಗೆ ಹೋಗೋದು?   ಎಂಜಿನಿಯರಿಂಗ್ ಮುಗಿಸಿ, ಸಾಫ್ಟ್‌ವೇರ್ ಕೆಲಸ ಹಿಡಿದಿದ್ದ ಎಲ್ಲರೂ, ಆ ಕಂಪ್ಯೂಟರ್ ನ ಮುಂದೆ ಕೂತು, ಕೂತು, ಕುರ್ಚಿ ಬೆಚ್ಚಗೆ ಮಾಡಿದ್ದಷ್ಟೇ ಅಲ್ಲ, ಆ ಏಸಿ ಗಾಳಿಗೆ, ಬೆವರು ಬಾರದೇ, ತಿಂದಿದ್ದು ಕರಗದೇ, ಹೊಟ್ಟೆ ಗಿರಿಧರ ಉಡುಪರು ಬಾರ್ಸೋ ಘಟಂ ನಂತೆ ಆಗಿದ್ದಿತು.   "ಏ ಅಡ್ಜಸ್ಟ್ ಮಾಡ್ಕೋಳಣಾ ಬಿಡ್ರೋ.." ಎಂದವನೇ ನೂತನ್ ಆಚಾರಿ.   ಆದ್ರೇ ಮ್ಯಾಟರ್ ಏನಂದ್ರೇ, ಅವತ್ತಿನ ದಿನ ಬೆಳಿಗ್ಗೆ ಹೊರಟಿದ್ದೇ ಐದು ಜನ. ನಮ್ ಗ್ಯಾಂಗಲ್ಲಿ ಕೈ ಕೊಡಕ್ಕೇ ಹೆಸರುವಾಸಿಯಾಗಿದ್ದ ಆಚಾರಿನೇ ಅವತ್ ಕೈ ಎತ್ತಿದ್ದ. ಅವ್ನು ಅವತ್ ಅಡ್ಜಸ್ಟ್ ಮಾಡ್ಕೊಳಣಾ ಅಂದಾಗ್ಲೇ ನಾವ್ ಯೋಚ್ನೇ ಮಾಡ್ಬೇಕಿತ್ತು. ಬಿಡಿ ಟ್ರಿಪ್ಪು ಅಂದ್ಮೇಲೆ ಯಾರಾದ್ರೂ ಕೈ ಕೊಡ್ಬೇಕಲಾ. ...

ನಾ ಕಂಡಂತೆ ನನ್ನೂರು ಭಾಗ - 4

Image
"ದೀಪೋಳ್ಗೇ... ದೀಪ್ ದೀಪೋಳ್ಗೇ..." " ಸೂವಿರೋ ಸಂಗಯ್ಯಾ, ಸೂವೀರೋ ಲಿಂಗಯ್ಯಾ... ಸೋಬಾಂದಲಿ ಬಾರೋ ಬಸವಯ್ಯಾ... ದೀಪೋಳೀಗೇನ್ನೀರೋ.. ನಮ್ಮೂರ ದ್ಯಾವ್ರಿಗೇ ... ನಮ್ಮೂರಾ ದ್ಯಾವ್ರಿಗೇ, ಏನೇನೂ ಪೂಜಾವೋ... ಏನೇನೂ ಪೂಜಾವೋ, ಹಾಲಣ್ಣು ಪೂಜಾವೋ... ದೀಪೋಳೀಗೇನ್ನೀರೋ.. ನಮ್ಮೂರ ದ್ಯಾವ್ರಿಗೇ ... "    ಅರೆ ಏನಪ್ಪಾ ಇದು ಅನ್ಕೊಂಡ್ರಾ? ನಮ್ ಮಲ್ನಾಡ್ ಭಾಗದೋರಿಗೆ ಇದೇನ್ ವಿಶೇಷ ಅಲ್ಲ ಬಿಡಿ. ಕಾರಣ, ಈ ದೀಪಾವಳಿ ಬಂತು ಅಂದ್ರೇ ಅಂಟಿಕೆ ಪಂಟಿಕೆ ಸದ್ದು ರಾತ್ರಿಯೆಲ್ಲಾ ಕೇಳೋದೇ. ಇದು ನಮ್ಮ ಮಲೆನಾಡಿನ ಪದ್ದತಿ. ದೀಪಾವಳಿ ಸಮಯದಲ್ಲಿ ಊರಿನ ಮುಖ್ಯ ದೇವರಿಗೆ‌ ಅಂದ್ರೇ ಗ್ರಾಮ ದೇವರ ದೇವಾಲಯದಲ್ಲಿ ಅಂಟಿಕೆ ಪಂಟಿಕೆ ತಂಡ ಕಟ್ಟುವ ಕೆಲಸ ನೆಡೆಯತ್ತೆ.    ಹಾಗಾದ್ರೇ ಈ ಅಂಟಿಕೆ ಪಂಟಿಕೆ ಅಂದ್ರೇ‌ ಏನು ? ಏನ್ ಮಾಡ್ತಾರೆ ಅಂತ ಯೋಚ್ನೇ ಮಾಡ್ತಾ ಇದಿರಾ?? ಇದು ನಮ್ಮ ಮಲೆನಾಡು, ಅದ್ರಲ್ಲೂ ತೀರ್ಥಹಳ್ಳಿ, ಕೊಪ್ಪಾ ಮತ್ತೇ ಶ್ರಿಂಗೇರಿ ಭಾಗಗಳಲ್ಲಿ ನೆಲೆ ನಿಂತರುವ ಒಂದು ಜಾನಪದ ಕಲೆ. ದೀಪಾವಳಿಯ ಮೊದಲ ದಿನದಿಂದ ಪ್ರಾರಂಭವಾಗಿ, ಹಬ್ಬದ ಮೂರೂ ದಿನ ರಾತ್ರಿ ಪೂರ್ತಿ ಊರಿನ ಯುವ ಸಮುದಾಯ ಈ ಅಂಟಿಕೆ ಪಂಟಿಕೆ ಯಲ್ಲಿ ಮಗ್ನವಾಗಿರತ್ತೆ. ಹಬ್ನದ ಮೊದಲ ದಿನ, ಗ್ರಾಮದೇವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿ, ಜ್ಯೋತಿ ಹಿಡಿದು ಹಾಡು ಶುರು ಮಾಡಿದ್ರೇ, ನಿಲ್ಲೋದು ಮಾರನೇ ದಿನ ಬೆಳಿಗ್ಗೇನೇ. ಒಬ್ರು ನಿಲ್ಸಿ...

"ಹೀಗೊಂದು ಪತ್ರ"

Image
"ಹೀಗೊಂದು ಪತ್ರ"  ಕಿತ್ತೊಗೆದ ಕರುಳ‌‌ ಕುಡಿಯ ಕರುಣಾಜನಕ ಕಥೆ...!!! ಕ್ಷೇಮ                             ಶ್ರೀ                   ದಿನಾಂಕ: 31/03/19 ಪ್ರೀತಿಯ ಅಪ್ಪ, ಅಮ್ಮನಿಗೆ..    ಉಭಯ ಕುಶಲೋಪರಿ ಸಾಂಪ್ರದಾ. ನಾನಿಲ್ಲಿ ಕ್ಷೇಮ , ಒಂದು ರೀತಿಯಲಿ ಹೇಳಬೇಕೆಂದರೆ ಅಲ್ಲಿಗಿಂತಲೂ ಕ್ಷೇಮ. ನೀವೂ ಕ್ಷೇಮವೆಂದು ಭಾವಿಸುತ್ತೇನೆ. ನಿಮ್ಮ ಕ್ಷೇಮ, ಸಮಾಚಾರಗಳಿಗೆ ಪತ್ರ ಬರೆಯಿರಿ ಎನ್ನಲು ನನ್ನ ವಿಳಾಸಕ್ಕೆ ಪತ್ರ ತಲುಪಿಸಲು ಯಾವೊಂದು ಅಂಚೆ ಕಛೇರಿಯೂ ಇಲ್ಲವೆಂದು, ನಿಮಗೂ ತಿಳಿದಿದೆಯೆಂದು ಭಾವಿಸುತ್ತೇನೆ.    ಬಹುಶಃ ನನಗೆ ತಿಳಿದ ಮಟ್ಟಿಗೆ, ನನ್ನಷ್ಟು ಚಿಕ್ಕ ವಯಸ್ಸಿಗೇ ಪತ್ರ ಬರೆಯುವ ಬುದ್ದಿ ಮತ್ತು ಕೌಶಲ್ಯ ಯಾವ ಮಗುವಿಗೂ ಇದ್ದಿರಲಿಕ್ಕಿಲ್ಲ. ಆದರೇ ಅದರಿಂದ ಆದ ಪ್ರಯೋಜನ? "ಇಷ್ಟು ಚಿಕ್ಕ ವಯಸ್ಸಿಗೇ ಅಸಮಾನ್ಯ ಶಕ್ತಿ, ಹೇಗೆ? ಈ ಮಗುವಿನ ಹಿಂದಿನ ಜನ್ಮ ರಹಸ್ಯವಾದರೂ ಏನು ? ಇಲ್ಲಾ ಇದು ದೇವರ ಪವಾಡವೆನು ? ನೋಡಿ 'ಅಸಮಾನ್ಯ ಪವಾಡ' " ಎಂದು ವಾರ್ತಾ ವಾಹಿನಿಗಳಲ್ಲಿ ಸುದ್ದಿ ಪ್ರಕಟಿಸುವಂತೆ ಮಾಡಲು, ಅವರ TRPಗೆ ಕಾರಣವಾಗಲು, ನೀವಿಬ್ಬರು ಇಂದು ಒಟ್ಟಿಗೇ ಇದ್ದರಲ್ಲವೇ ?    ಅಪ್ಪಾ..., ಅಮ್ಮನ ಮೊದಲ ನಗೆ...

ನಿಟ್ಟುಸಿರು

Image
"ನಿಟ್ಟುಸಿರು" ಕಂಡು ಅವನ ಮೊದಲ ಉಸಿರು...!!!    ' ದಾವಣಗೆರೆ ' ಹೆಸರು ಕೇಳಿದರೇ, ದೋಸೆಯ ನೆನಪಾಗಿ ಬಾಯಲ್ಲಿ ನೀರು ಬಾರದೇ ಇರದು. ಇದು ಬೆಣ್ಣೆ ದೋಸೆಯಾ ನಗರಿ. ಹೇಳುವಂತಹಾ ದೊಡ್ಡ ನಗರವಲ್ಲದಿದ್ದರೂ ಜಿಲ್ಲಾ ಕೇಂದ್ರವಾದ್ದರಿಂದ, ವ್ಯಾಪಾರ ವಹಿವಾಟಿಗೆ ಕಮ್ಮಿಯಿಲ್ಲ. ನಾನು ಹೇಳ ಹೊರಟಿರುವ ಕಥೆಯೂ ಇಲ್ಲಿಯದೇ.    ಅದೊಂದು ಸಾಯಂಕಾಲ, ಸುಮಾರು ಹತ್ತರಿಂದ ಹನ್ನೆರಡು ತೆಂಗಿನ ಸಸಿಯಿದ್ದ ಮನೆಯ ಹಿಂದಿನ ಕೈತೋಟಕ್ಕೆ ನೀರನ್ನು ಹಾಯಿಸಿ ಮನೆಯ ಕಡೆಗೆ ಹಿಂದಿರುಗುವಾಗ ಕುಸುಮಳ ಮನದಲ್ಲಿ ಅದೇನೋ ತೃಪ್ತಿ. ಮೂಲತಃ ಕೃಷಿ ಕುಟುಂಬದಿಂದಲೇ ಬಂದಿದ್ದ ಕುಸುಮ, ಮದುವೆಯಾದದ್ದು ಮಾತ್ರಾ ಹೋಟೆಲ್ಲು ವ್ಯಾಪಾರಿ ರಾಘವೇಂದ್ರನನ್ನ. ಆದರೂ ಕುಸುಮಳಿಗೆ ಅದೇನೋ ಕೃಷಿ ಮಾಡಬೇಕೆಂಬುದೊಂದೇ ಆಸೆ. ನೆಟ್ಟ ತೆಂಗಿನ ಸಸಿಗಳೆಲ್ಲವೂ ಮರವಾದಂತೆ, ಅದರಿಂದ ಎಳನೀರ ಇಳಿಸಿ ಮಕ್ಕಳಿಗೆ ಕುಡಿಸಿದಂತೆ, ಕೈತೊಟದಮಲ್ಲೇ ಬೆಳೆದ ತರಕಾರಿಯಲ್ಲೇ ದಿನವೂ ಅಡಿಗೆ ಮಾಡಿದಂತೆ ಹೀಗೆ ಹತ್ತು ಹಲವು ಕನಸುಗಳನ್ನು ಅದಾಗಲೇ ಕಂಡಿದ್ದಳು ಕುಸುಮ. ಅದೇನೋ ಹೇಳ್ತಾರಲ್ಲಾ 'ಕೂಸು ಹುಟ್ಟುವ ಮುಂಚೆ, ಕುಲಾವಿ ಹೊಲಿಸಿದರಂತೆ' ಹಾಗೆ.    ಕುಸುಮ ತುಂಬು ಗರ್ಭಿಣಿಯಾದರೂ, ಮಾಡುವ ಕೆಲಸಗಳ ಬಿಟ್ಟವಳಲ್ಲ. ಮನೆಯ ಹಿಂದಿನ ತೋಟಕ್ಕೆ ನೀರು ಹಾಯಿಸಿ, ಗರ್ಭದಲ್ಲಿ ಸುಮ್ಮನೇ ಮಲಗಿದ್ದ ಮಗುವನ್ನೂ ಮಾತನಾಡಿಸಿ, ಸೂರ್ಯನು ಕಣ್ಮರೆಯಾಗುವ ಸುಳಿವು ನೀಡಿದ್ದರಿಂ...

ತ್ರಿಶಂಕು ನರಕ

Image
"ತ್ರಿಶಂಕು ನರಕ " ಮಲೆನಾಡು ಹುಡುಗನ ಮಾರೆಲ್ ಸ್ಟೋರಿ...!!!         ಬೆಂ ಗಳೂರು, ಇದೊಂದು ಮಾಯಾನಗರಿ. ಈ ಊರಿನ ವಿಶೇಷತೆಯೋ ಏನೋ ಗೊತ್ತಿಲ್ಲ, ಬೆಂಗಳೂರು ಯಾವತ್ತೂ ಯಾರನ್ನೂ ಹಸಿವಿನಿಂದ ಮಲಗಿಸಲ್ಲ. ಏನಿಲ್ಲವೆಂದರೂ, ಪ್ರತಿದಿನದ ಊಟ ಹುಟ್ಟಿಸಿಕೊಳ್ಳಲು ಇಲ್ಲಿ ಅಡೆತಡೆಗಳಿಲ್ಲ ಎಂದೇ ಹೇಳಬಹುದು. ಕೆಲಸ ಮಾಡುವ ಹುಮ್ಮಸ್ಸಿದ್ದರೆ ದುಡಿಮೆಗೆ ತಡೆಗೋಡೆಯಿಲ್ಲ. ಸ್ವಲ್ಪ ಜಾಸ್ತಿ ದುಡಿದರೆ, ಬಾಡಿಗೆ ಮನೆಗಳೂ ಲಭ್ಯ. ಇಲ್ಲವಾದಲ್ಲಿ ಬ್ಯಾಚುಲರ್ ರೂಮುಗಳಲ್ಲೇ 5-6 ಜನ ವಾಸಿಸುವುದನ್ನೂ ಕಂಡಿದ್ದೇನೆ. ಇನ್ನೂ ಸ್ವಲ್ಪ ಜಾಸ್ತಿ ಹಣ ಹರಿದಾಡಿದಲ್ಲಿ 1BHK, 2BHK ಮನೆಗಳೂ ಸಿಕ್ಕುವುದು. ಕೊನೆಯ ಪಕ್ಷ ಯಾವೂದೂ ಸಿಗದಿದ್ದರೇ, ಬಸ್ಸುಸ್ಟಾಂಡ್, ಪಾರ್ಕುಗಳೂ ಇವೆ.    ಇಷ್ಟೆಲ್ಲಾ ಇದ್ದರೂ, ಈ ಬ್ರಹ್ಮಚಾರಿಗಳ ಜೀವನ ದೇವರಿಗೇ ಪ್ರೀತಿ. ಅವರ ಸ್ಥಿತಿ ಮಾತ್ರಾ ಯಾರಿಗೂ ಬೇಡ. ಬ್ರಹ್ಮಚಾರಿಗಳಿಗೆ ಮನೆಯ ಬಾಡಿಗೆ ನೀಡಲೇ ಎಲ್ಲರೂ ಹೆದರುತ್ತಾರೆ. ಕಾರಣಗಳೂ ಬಹಳಷ್ಟಿವೆ ಹಾಗಿರಲಿ. ಆದರೇ ಅದೆಷ್ಟೇ ದುಡಿದರೂ ಸ್ವಂತ ಜಾಗದಲಿ, ಸ್ವಂತ ಮನೆ ಕನಸಿನ ಮಾತೇ. ಕಾರಣವಿಷ್ಟೇ, ಮನೆಕಟ್ಟಲು ಜಾಗವೆಲ್ಲಿದೆ ಸ್ವಾಮಿ ಈ ಸಿಲಿಕಾನ್ ಸಿಟಿಯಲ್ಲಿ?    ಅದೇನೋಪಾ, ಮನೆ ಮೇಲೆ ಮನೆಯಂತೆ, ಅದರಮೇಲೆ ಮತ್ತೊಂದು ಮನೆಯಂತೆ. ನೆಲದಮೇಲೆ ರೋಡಂತೆ, ಅದರ ಮೇಲೆ ಮತ್ತೊಂದು ರೋಡಂತೆ. ಅವೆಲ್ಲದರ ಮೇಲೆ ರೈಲಂತ...