ನಿಟ್ಟುಸಿರು
"ನಿಟ್ಟುಸಿರು"
ಕಂಡು ಅವನ ಮೊದಲ ಉಸಿರು...!!!
'ದಾವಣಗೆರೆ' ಹೆಸರು ಕೇಳಿದರೇ, ದೋಸೆಯ ನೆನಪಾಗಿ ಬಾಯಲ್ಲಿ ನೀರು ಬಾರದೇ ಇರದು. ಇದು ಬೆಣ್ಣೆ ದೋಸೆಯಾ ನಗರಿ. ಹೇಳುವಂತಹಾ ದೊಡ್ಡ ನಗರವಲ್ಲದಿದ್ದರೂ ಜಿಲ್ಲಾ ಕೇಂದ್ರವಾದ್ದರಿಂದ, ವ್ಯಾಪಾರ ವಹಿವಾಟಿಗೆ ಕಮ್ಮಿಯಿಲ್ಲ. ನಾನು ಹೇಳ ಹೊರಟಿರುವ ಕಥೆಯೂ ಇಲ್ಲಿಯದೇ.
ಅದೊಂದು ಸಾಯಂಕಾಲ, ಸುಮಾರು ಹತ್ತರಿಂದ ಹನ್ನೆರಡು ತೆಂಗಿನ ಸಸಿಯಿದ್ದ ಮನೆಯ ಹಿಂದಿನ ಕೈತೋಟಕ್ಕೆ ನೀರನ್ನು ಹಾಯಿಸಿ ಮನೆಯ ಕಡೆಗೆ ಹಿಂದಿರುಗುವಾಗ ಕುಸುಮಳ ಮನದಲ್ಲಿ ಅದೇನೋ ತೃಪ್ತಿ. ಮೂಲತಃ ಕೃಷಿ ಕುಟುಂಬದಿಂದಲೇ ಬಂದಿದ್ದ ಕುಸುಮ, ಮದುವೆಯಾದದ್ದು ಮಾತ್ರಾ ಹೋಟೆಲ್ಲು ವ್ಯಾಪಾರಿ ರಾಘವೇಂದ್ರನನ್ನ. ಆದರೂ ಕುಸುಮಳಿಗೆ ಅದೇನೋ ಕೃಷಿ ಮಾಡಬೇಕೆಂಬುದೊಂದೇ ಆಸೆ. ನೆಟ್ಟ ತೆಂಗಿನ ಸಸಿಗಳೆಲ್ಲವೂ ಮರವಾದಂತೆ, ಅದರಿಂದ ಎಳನೀರ ಇಳಿಸಿ ಮಕ್ಕಳಿಗೆ ಕುಡಿಸಿದಂತೆ, ಕೈತೊಟದಮಲ್ಲೇ ಬೆಳೆದ ತರಕಾರಿಯಲ್ಲೇ ದಿನವೂ ಅಡಿಗೆ ಮಾಡಿದಂತೆ ಹೀಗೆ ಹತ್ತು ಹಲವು ಕನಸುಗಳನ್ನು ಅದಾಗಲೇ ಕಂಡಿದ್ದಳು ಕುಸುಮ. ಅದೇನೋ ಹೇಳ್ತಾರಲ್ಲಾ 'ಕೂಸು ಹುಟ್ಟುವ ಮುಂಚೆ, ಕುಲಾವಿ ಹೊಲಿಸಿದರಂತೆ' ಹಾಗೆ.
ಕುಸುಮ ತುಂಬು ಗರ್ಭಿಣಿಯಾದರೂ, ಮಾಡುವ ಕೆಲಸಗಳ ಬಿಟ್ಟವಳಲ್ಲ. ಮನೆಯ ಹಿಂದಿನ ತೋಟಕ್ಕೆ ನೀರು ಹಾಯಿಸಿ, ಗರ್ಭದಲ್ಲಿ ಸುಮ್ಮನೇ ಮಲಗಿದ್ದ ಮಗುವನ್ನೂ ಮಾತನಾಡಿಸಿ, ಸೂರ್ಯನು ಕಣ್ಮರೆಯಾಗುವ ಸುಳಿವು ನೀಡಿದ್ದರಿಂದ ಮನೆಯೊಳಗೆ ಬಂದಳು. ಮೂರು ಸಂಜೆಯ ಹೊತ್ತು, ಕೈಕಾಲು ತೊಳೆದು ದೇವರಿಗೆ ದೀಪವನ್ನು ಹಚ್ಚುವುದು ಅವಳ ಹವ್ಯಾಸ. ಇನ್ನೇನು ದೀಪವ ಹಚ್ಚಿ, ದೇವರ ಸ್ತೋತ್ರವ ಹೇಳಲನುವಾಗಿದ್ದಳಷ್ಟೇ, ಆಗಲೇ ರಾಘವೇಂದ್ರ ಕೂಗಿದ "ಕುಸುಮಾ... ರಷ್ ಉಂಟು, ಬೇಗ ಬಾ". ಅದನ್ನು ಕೇಳಿ ಕುಸುಮ ಹೋಟೆಲಿಗೆ ಬಂದಳು.
ರಾಘವೇಂದ್ರನದು ಅತ್ತ ದೊಡ್ಡದೂ ಅಲ್ಲದ, ಇತ್ತ ಚಿಕ್ಕದೂ ಅಲ್ಲದ ಹೋಟೆಲ್ಲು. ದಾವಣಗೆರೆಯ ನಗರದ ಕೊನೆಯಲ್ಲಿ ಇದ್ದುದರಿಂದ ಅಲ್ಲೇ ಹಿಂದೆ ಮನೆಯೂ, ಕುಸುಮಳ ಕೈತೋಟಕ್ಕೆ ಜಾಗವೂ ಇದ್ದಿತ್ತು. ದಾವಣಗೆರೆ ನಗರದ ತುದಿಯಲ್ಲಿದ್ದ ಹೋಟೆಲ್ ಆದ್ದರಿಂದ, ಪ್ರವಾಸಿಗರಿಗೆ ಪಾರ್ಕಿಂಗ್ ಸಮಸ್ಯೆ ಇರಲಿಲ್ಲ. ಹಾಗೆಯೇ ನಗರದ ಹೃದಯ ಭಾಗದಲ್ಲಿದ್ದಂತೆ ಟ್ರಾಫಿಕ್ ಕಿರಿ ಕಿರಿಯೂ ಇರಲಿಲ್ಲವಾದ್ದರಿಂದ ಬಹುಪಾಲು ಪ್ರವಾಸಿಗರಿಗೆ ಉತ್ತಮ ಬೆಣ್ಣೆ ದೋಸೆ ಸವಿಯಲು ರಾಘವೇಂದ್ರನ " ಬೃಂದಾವನ" ಹೋಟೆಲಿಗೆ ಬರುವುದೇ ರೂಢಿ. ಅದಲ್ಲದೇ, ಹಳೆಯ ಹೋಟೆಲು ಕೆಡವಿ, ಇತ್ತೀಚೆಗಷ್ಟೇ ಹೊಸ ಕಟ್ಟಡ ಕಟ್ಟಿದ್ದರಿಂದ ಅದರ ಸಾಲದ ಹೊರೆಯಲ್ಲಿಯೂ ರಾಘವೇಂದ್ರನಿದ್ದ. ಅದಕ್ಕಾಗಿಯೇ, ಕುಸುಮ ತಾನು ತುಂಬುಗರ್ಭಿಣಿಯಾದರೂ ವಿಶ್ರಾಂತಿ ತೆಗೆದುಕೊಳ್ಳದೇ ಕೆಲಸದಲ್ಲಿ ಮಗ್ನಳಾಗಿದ್ದಳು.

ಎಷ್ಟಾದರೂ ಹೆಣ್ಣು ಜೀವ. ಒತ್ತಡ ಮತ್ತು ಅತೀಯಾದ ವಿಶ್ರಾಂತಿಯಿಲ್ಲದ ಕೆಲಸ ಹಾಗೇ ಎಲ್ಲರೆದುರು ಸಾಧಿಸಬೇಕೆಂಬ ಹಠ ಎಲ್ಲವೂ ಅತೀಯಾಗಿ, ಅದಾಗಲೇ ಒಂದು ಮಗು ಅಸುನೀಗಿದ್ದ ಘಟನೆ ಮರೆಯಲಾಗದೇ ಮರೆತಿದ್ದರೂ, ರಾತ್ರಿ ಕನಸಿನಲ್ಲೂ ಅವಳಿಗೇ ಅದೇ ಭಯ ಕಾಡಿತ್ತು. ದೇವರು ಕರುಣಿಸಿದ್ದರೂ, ಅವಳ ದೇಹಕ್ಕೆ ಅದು ಬೇಡವಾಗಿ, ದೇಹವೇ ಆ ಜೀವವ ದಂಡಿಸಿತ್ತು. ಈಗ ಮತ್ತೊಂದು ಮಗುವಿಗೂ ಹಾಗೆಯೇ ಆದರೇನು ಗತಿ?
ಈ ಎಲ್ಲ ಯೋಚನೆಯು ತಲೆಯಲ್ಲಿದ್ದರೂ ಅಂದು ಬಹಳ ವ್ಯಾಪಾರವಿದ್ದ ಕಾರಣ ಅವಳಿಗೆ ಅದ್ಯಾವುದೂ ನೆನಪಿಗೆ ಬಾರಲೇ ಇಲ್ಲ. ಅದೋ ಏಪ್ರಿಲ್ ತಿಂಗಳ ಎರಡನೇ ಶನಿವಾರ, ವಾರದ ಕೊನೆ, ಮಕ್ಕಳಿಗೂ ರಜೆ ಹಾಗಾಗಿ ಎಲ್ಲೆಲ್ಲಿಗೋ ಪ್ರವಾಸ ಹೊರಟವರ ಕಾರು, ಬೈಕುಗಳು ಬೃಂದಾವನದೆದುರು ಲಂಗರು ಹಾಕಿದ್ದವು. ಅದೊಂದೇ ಸಂಜೆ ತುಂಬು ಗರ್ಭಿಣಿ ಕುಸುಮ ಸುಮಾರು ನೂರರಿಂದ ನೂರೈವತ್ತು ದೋಸೆಯನ್ನು, ಕಾದ ಕಾವಲಿಯೆದುರು ನಿಂತು ಹಾಕಿದ್ದಳೆಂದರೇ ಆಶ್ಚರ್ಯವಾಗದೇ ಇರದು. ಹೇಳಿದ್ದೆನಲ್ಲ ಅವಳದು ಹಠದ ಸ್ವಭಾವ.
ಇತ್ತ ರಾಘವೆಂದ್ರನ ಗಲ್ಲಾಪೆಟ್ಟಿಗೆ ತುಂಬಿತ್ತು. ಇತ್ತ ಒಂದರಹಿಂದೊಂದರಂತೆ ಬೆಣ್ಣೆ ದೋಸೆಯನ್ನು ಮಾಡಿದ್ದ ಕುಸುಮ ಸುಸ್ತಾಗಿ ಕುರ್ಚಿಯ ಮೇಲೆ ಕುಳಿತಾಗ ಹಳೆಯ ನೆನಪುಗಳ ಚಿತ್ರಸಂತೆ ಅವಳ ಮನಸ್ಸನ್ನಾವರಿಸಿತ್ತು. ಹಾಗೆಂದು ರಾಘವೇಂದ್ರ ಸುಮ್ಮನೇ ಕೂತವನಲ್ಲ. ಅವನ ದಿನಚರಿ ಬೆಳಗಿನ ಜಾವ 4:30 ಪ್ರಾರಂಭವಾದರೇ ಮುಗಿಯುವುದೇ ರಾತ್ರಿ 11:00 ಗಂಟೆಗೆ. ಕೊನೆಗೂ ಆ ದಿನದ ಕೆಲಸಗಳೆಲ್ಲವನ್ನೂ ಮುಗಿಸಿ ರಾಘವೇಂದ್ರ ಮತ್ತು ಕುಸುಮ ಮನೆಯ ಕಡೆಗೆ ಮುಖ ಮಾಡಿದರು.

ಮಾರನೆಯ ದಿನ ಎಂದಿನಂತೆಯೇ ಬೆಳಗಿನ ಜಾವವೇ ಎದ್ದ ರಾಘವೇಂದ್ರ ಹೋಟೆಲಿನ ಕೆಲಸಗಳಲ್ಲಿ ತಲ್ಲೀನನಾಗಿದ್ದ. ಸಮಯ 5:30 ರ ಆಸುಪಾಸು ಇದ್ದಿರಬಹುದು, ಕುಸುಮ ಇನ್ನೇನು ಎದ್ದು, ಮುಖ ತೊಳೆದು, ಹೊರಗೆ ಬರುತ್ತಿದ್ದಳಷ್ಟೇ. ಹೆರಿಗೆ ನೋವು ಕಾಣಿಸಿತು. ಮನೆಯಲ್ಲಿಯೋ ಯಾರೊಬ್ಬರೂ ಇಲ್ಲ. ಅವಳಿಗೋ ಕೂಗಲು ಶಕ್ತಿಯೂ ಇಲ್ಲ. ಹಿಂದಿನ ದಿನದ ಕೆಲಸದ ಆಯಾಸ ಬೇರೆ. ಒಬ್ಬಳೇ ಏನು ಮಾಡಲೊಂದೂ ತಿಳಿಯದೇ ಒಬ್ಬಳೇ ನೊವಿನಿಂದ ನರಳುತ್ತಿದ್ದಳು. ಹಾಗೆಂದು ಹೋಟೆಲು ಕಿಲೋಮೀಟರುಗಟ್ಟಲೆ ದೂರದಲ್ಲೇನು ಇರಲಿಲ್ಲ, ಕೆಲಸದಲ್ಲಿ ತಲ್ಲೀನನಾಗಿದ್ದ ರಾಘವೇಂದ್ರನಿಗೆ ಇದು ಅನುಭವಕ್ಕೆ ಬರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಚಿತ್ರಾನ್ನಕ್ಕೆ ಒಗ್ಗರಣೆ ಹಾಕುತ್ತಿದ್ದ ರಾಘವೇಂದ್ರನಿಗೆ ಅರಶಿನ ಖಾಲಿಯಾದದ್ದು ನೆನಪಾಗಿ ಮನೆಕಡೆಗೆ ಬಂದವನೇ ದೇವರುಮನೆಯ ಬಳಿ ಗೋಡೆಗೆ ಒರಗಿ ಹೆರಿಗೆ ನೋವಿನಿಂದ ನರಳುತ್ತಿದ್ದ ಕುಸುಮಳನ್ನು ನೋಡಿ, ಏನು ಮಾಡಲೆಂದು ಅರಿವಾಗದೇ ಅವಾಕ್ಕಾಗಿ ಹೋದ.
ರಾಘವೇಂದ್ರನೋ ತಾಯಿಇಲ್ಲದೇ ಬೆಳೆದವನು. ಚಿಕ್ಕಮ್ಮನ ವಕ್ರದೃಷ್ಠಿಯಿಂದಾಗಿ ತನ್ನ ತಂದೆಯಿಂದಲೂ ದೂರಾಗಿದ್ದ. ಆ ಬೆಳಗಿನ ಜಾವ ಇವನು ಮಾಡುವುದಾದರೂ ಏನು? ಅವನಿಗಾದರೂ ಏನು ಗೊತ್ತು ಹೆರಿಗೆಯ ಬಗ್ಗೆ? ಆದರೂ ಹಿಂದಿನ ಹೆರಿಗೆಯಲ್ಲಿ ಮಗು ಕಳೆದುಕೊಂಡಿದ್ದೊಂದೇ ನೆನಪಿದ್ದದ್ದು ಅವನಿಗೂ. ಹಾಗೋ ಹೀಗೋ ಮಾಡಿ ಬಹಳ ಹುಷಾರಾಗಿಯೇ ಕುಸುಮಳನ್ನು ಅಲ್ಲೇ ಹತ್ತಿರದಲ್ಲಿದ್ದ ಮಂಚದ ಮೇಲೆ ಮಲಗಿಸಿದ.
ಆ ಭಾನುವಾರದ ಬೆಳಗಿನಜಾವ ಆಸ್ಪತ್ರೆಯಲ್ಲಿ ಯಾವ ಡಾಕ್ಟರು ತಾನೇ ಸಿಕ್ಕಿಯಾರು? ಆದರೇ, ಎದುರುಮನೆಯಲ್ಲಿಯೇ ನರ್ಸು ರಾಜಮ್ಮ ಇದ್ದದ್ದು ಥಟ್ಟನೆ ನೆನಪಾಗಿ, ಅವರಮನೆಗೆ ಓಡೋಡಿ ಹೋಗಿ ಬಾಗಿಲು ಬಡಿದನು. ಬೆಳಗಿನ ಜಾವದ ನಿದ್ರಯಲ್ಲಿದ್ದ ರಾಜಮ್ಮಳ ಗಂಡ ವಿಠಲಣ್ಣ ಬಾಗಿಲು ತೆಗೆದಾಗ ರಾಘವೇಂದ್ರನ ನೋಡಿಯೇ ಪರಿಸ್ಥಿತಿ ಅರಿವಾಗಿ ರಾಜಮ್ಮಳನ್ನೂ ಎಬ್ಬಿಸಿದ. ಅವರಿಗೂ ಹಿಂದಿನ ಮಗುವಿನ ಸಾವಿನ ಬಗ್ಗೆ ತಿಳಿದೇ ಇತ್ತು. ರಾಘವೇಂದ್ರನಿಗೋ ಅದೇ ಆತಂಕ. ಹಿಂದಿನ ಮಗುವಿನ ಕಳೇಬರವನ್ನು ಕೈನಲ್ಲಿ ಹಿಡಿದದ್ದು ಕಣ್ಣ ಮುಂದೆಯೇ ಇತ್ತು. ಮತ್ತೊಂದು ಮಗುವೂ ಹಾಗೆಯೇ ಆಗುವುದೇನೋ ಎಂಬ ಭಯ, ಕಳವಳ. ಪುರುಷನೇ ಆದರೂ ಅವನೂ ಮಗುವಿನ ತಂದೆಯೇ ಅಲ್ಲವೇನು?
ರಾಜಮ್ಮಳ ಜೊತೆಗೇ ಮನೆಕೆಲಸದಾಕೆ ಮುತ್ತಮ್ಮಳೂ ಅದೇ ಸಮಯಕ್ಕೆ ಬರಲು ಸರಿಯಾಯಿತು. ಮುತ್ತಮ್ಮಳೂ ಅದೆಷ್ಟೋ ಹೆರಿಗೆ ಮಾಡಿಸಿದ್ದವಳೇ. ಇವೆಲ್ಲವೂ ಹತ್ತು ನಿಮಿಷದಲ್ಲಿ ನೆಡೆದದ್ದೇ ಆದರೂ ಅತ್ತ ಕುಸುಮಳಿಗೆ ನೋವು ನಿಮಿಷ ನಿಮಿಷಕ್ಕೂ ಜಾಸ್ತಿಯಾಗುತ್ತಲೇ ಇತ್ತು. ಜೊತೆಗೆ ರಾಘವೇಂದ್ರನಿಗೂ ಭಯ ಮತ್ತು ಆತಂಕ ದ್ವಿಗುಣವಾಗುತ್ತಲಿತ್ತು. ಭಯಕ್ಕೆ ಅವನ BP ಕಡಿಮೆಯಾಗಿ ಕೈ ನಡುಗಲಾರಂಭಿಸಿ, ಮೈ ಬೆವರಲಾರಂಭಿಸಿತು. ಆದರೇ ಅವನ ಆಸೆಕಂಗಳು ಹುಟ್ಟುವ ಮಗುವಿನ ಮುಖವ ನೋಡಲು ಕಾತರದಿಂದ ಕಾಯುತ್ತಿತ್ತು. ಅದು ಇವನನ್ನು ಅಪ್ಪ ಎಂದು ಕರೆದಂತೆ, ಅವನನ್ನು ಇವನೇ ಬೈಕಿನಲಿ ಶಾಲೆಗೆ ಸೇರಿಸಿಬಂದಂತೆ ಹೀಗೆ ಅನೇಕ ಕನಸುಗಳೂ ತಲೆಯಲ್ಲಿ ಓಡುತ್ತಲಿತ್ತು. ಆತಂಕ, ತವಕವನ್ನೂ ತಡೆಯಲಾರದೇ ಅಂಡು ಸುಟ್ಟ ಬೆಕ್ಕಿನಂತೆ ಎಲ್ಲೂ ಕೂರದೇ ತಿರುಗುತ್ತಲೇ ಇದ್ದ.

ಸಾಮಾನ್ಯ 30 ನಿಮಿಷಗಳಾಗದ್ದಿರಬಹುದು. ಮುತ್ತಮ್ಮ ರಾಘವೇಂದ್ರನ ಕಡೆಗೆ ಬಂದವಳೇ, "ಅಯ್ಯಾ, ಗಂಡು ಮಗು" ಎಂದೊಡನೆ, ರಾಘವೇಂದ್ರನ ಸಂತೋಷಕ್ಕೆ ಪಾರವೇ ಇರಲಿಲ್ಲ. ಖುಷಿಯಲ್ಲಿ ತೇಲಾಡುತ್ತಿದ್ದ.
ಮುತ್ತಮ್ಮ ಮಾತನ್ನು ಮುಂದುವರಿಸಿ, "ಆದರೇ, ... "
"ಆದರೇ ? ಏನು? "... ರಾಘವೇಂದ್ರ ಭಯದಿಂದಲೇ ಕೇಳದನು.
" ಮಗು ಇನ್ನೂ ಅಳಲಿಲ್ಲ. ಜೊತೆಗೆ ಮಗುವಿನ ಮೈ ಸಂಪೂರ್ಣ ನೀಲಿ ಗಟ್ಟಿದೆ" ಮುತ್ತಮ್ಮ ಹೇಳಿದಳು.
ಇದನ್ನು ಕೇಳಿದ ರಾಘವೇಂದ್ರನಿಗೆ ಒಮ್ಮೆಲೆ ಸಿಡಿಲು ಬಡಿದಂತಾಗಿ ಅಲ್ಲೇ ಕುಸಿದನು. ಈ ಮಗುವೂ ಜಗಕ್ಕೆ ಬರುವ ಮೊದಲೇ, ಅಪ್ಪ ಅಮ್ಮನ ನೋಡುವ ಮುನ್ನವೇ ಕಣ್ಣು ಮುಚ್ಚಿತಲ್ಲಾ ಎಂದು ಏನೇನೋ ನೆನೆದು ಮೂಕನಾಗಿ, ಗೋಡೆಗೆ ಒರಗಿ ಅಸಹಾಯಕನಾಗಿ ಆಗಸದ ಕಡೆ ಮುಖ ಮಾಡಿದ್ದರೇ, ಕಣ್ಣಂಚು ತೇವವಾಗಿ ಕಣ್ಣೀರು ನೆಲಕ್ಕೆ ಅಪ್ಪಳಿಸಿತು.
ಏನೇ ಆದರೂ, ಹೇಗಾದರೂ ಈ ಮಗುವನ್ನು ಬದುಕಿಸಬೇಕೆಂಬುದೊಂದೇ ಬಯಕೆ ರಾಜಮ್ಮ ಮತ್ತು ಮುತ್ತಮ್ಮರಿಗೂ. ಅದೆಷ್ಟೋ ಹೆರಿಗೆ ಮಾಡಿಸಿದ್ದ ಈರ್ವರೂ ತಮಗೆ ಗೊತ್ತಿದ್ದ ಪ್ರಯತ್ನಗಳನ್ನೂ ಮಾಡಲಾರಂಭಿಸಿದರು. ಮಗುವಿನ ಪೃಷ್ಠಕ್ಕೆ ಹೊಡೆದರು, ಪ್ರಯೋಜನವಾಗಲಿಲ್ಲ. ನೀರಿನ ಪಾತ್ರೆಯೊಳಕ್ಕೆ ಹಾಕಿ ಎತ್ತಿದರು, ಏನೂ ಆಗಲಿಲ್ಲ. ಉಗುರು ಬೆಚ್ಚಗಿನ ನೀರಿನಿಂದ ತೊಳೆದರು, ಏನೇ ಮಾಡಿದರೂ ಉಸಿರಾಟವೂ ಇಲ್ಲ, ಮೈ ನೀಲಿ ಬಣ್ಣದಿಂದ ತಿರುಗುತ್ತಿಲ್ಲ, ಮಗು ಅಳುತ್ತಿಲ್ಲ. ಅತ್ತ ಕುಸುಮಳಿಗೆ ಪ್ರಗ್ನೆಯಿಲ್ಲ, ಇತ್ತ ರಾಘವೇಂದ್ರ ಕೂಡ ಎಲ್ಲವನ್ನೂ ಕೈಚೆಲ್ಲಿ ಕುಳಿತಿದ್ದ.
ಅದೇ ಸಮಯಕ್ಕೆ ವಿಠಲಣ್ಣ, ಡಾಕ್ಟರ ಮನೆಗೆ ಹೋಗಿ ಅವರನ್ನು ಕರೆತಂದ. ಮಗುವನ್ನು ನೋಡಿದ ಡಾಕ್ಟರಿಗೂ ಆಶ್ಚರ್ಯ, ಕಾರಣ ಮಗುವಿನ ದೇಹ ಸಂಪೂರ್ಣವಾಗಿ ನೀಲಿಗಟ್ಟಿದೆ. ಅದಲ್ಲದೇ, ಮಗು ಉಸಿರಾಡುತ್ತಲೂ ಇಲ್ಲ, ಅಳುತ್ತಲೂ ಇಲ್ಲ. ಯೋಚಿಸಿ ಕಾಲಹರಣ ಮಾಡಲು ಅಷ್ಟೊಂದು ಸಮಯವೂ ಇಲ್ಲ. ಹಾಗೆಂದು ಸುಮ್ಮನೆ ಕೈ ಚೆಲ್ಲುವಂತಿಲ್ಲ. ಇದೊಂದು ಜೀವದ ಪ್ರಶ್ನೆ.
ಅವರೂ ಮತ್ತೊಮ್ಮೆ ನೀರಿಗೆ ಹಾಕಿ ಎತ್ತಿದರು. ಎರಡು ಮೂರು ಸಾರಿ ಮಾಡಿದರೂ ಯಾವುದೇ ಫಲಿತಾಂಶವಿಲ್ಲ. ಬಾಯಲ್ಲಿ ಬಾಯಿಟ್ಟು ಉಸಿರು ಕೊಟ್ಟರು, ಪ್ರಯೋಜನವಾಗಲಿಲ್ಲ. ಎದೆಯ ಭಾಗದಲ್ಲಿ ನಿಧಾನವಾಗಿ ಒತ್ತಿದರು, ಊಹೂಂ ಏನೂ ಉಪಯೋಗವಾಗಲಿಲ್ಲ. ಇವೆಲ್ಲವೂ ಕೆಲವೇ ನಿಮಿಷಗಳಲ್ಲಿ ನೆಡೆದರೂ, ರಾಘವೇಂದ್ರ ಇವೆಲ್ಲವನ್ನು ನೋಡಿ ಬೆವತು ಗಾಬರಿಗೊಂಡಿದ್ದ. ಅತ್ತ ಕುಸುಮಳಿಗೆ ಏನಾಗುತ್ತಿದೆ ಎಂಬ ಅರಿವೇ ಇಲ್ಲ.
ಸತತ ಪ್ರಯತ್ನಗಳ ನಂತರ, ಡಾಕ್ಟರು ಎಲ್ಲ ಪ್ರಯತ್ನಗಳೂ ಆಯಿತು, ಇನ್ನೊಂದು ಕೊನೆಯ ಪ್ರಯತ್ನವನ್ನೂ ಮಾಡೋಣ. ಇದನ್ನು ಬಿಟ್ಟು ಈ ಸಮಯಕ್ಕೆ ಇನ್ಯಾವುದೇ ಮಾರ್ಗವೂ ಉಳಿದಿಲ್ಲ. ಇನ್ನೇನೇ ಇದ್ದರೂ ಆ ದೇವರು ಕಾಪಾಡಬೇಕಷ್ಟೇ. ಎಂದು ದೇವರ ಮೇಲೆ ಭಾರ ಹಾಕಿದರು. ಇದ ಕೇಳಿದ ರಾಘವೇಂದ್ರ ಅಕ್ಷರಶಃ ಮಗುವಿನ ಆಸೆಯನ್ನೇ ಮರೆತುಬಿಟ್ಟಿದ್ದ. ಇತ್ತ ವಿಠಲಣ್ಣ ಮಾತ್ರ ಇದ್ದ ಬದ್ದ ದೇವರಿಗೆಲ್ಲಾ ಹರಕೆಯನ್ನು ಹೊತ್ತುಬಿಟ್ಟಾಗಿತ್ತು.
ಮೂಡಣದಲ್ಲಿ ಸೂರ್ಯರಷ್ಮಿ ಭೂಮಿ ತಲುಪಲು ಹವಣಿಸುತ್ತಿದ್ದರೆ, ಇಲ್ಲೊಂದು ಜೀವವೂ ಭೂಮಿಯಲ್ಲಿ ತನ್ನ ಉಳಿವನ್ನು ಖಾಯಂ ಮಾಡಿಕೊಳ್ಳಲು ಹವಣಿಸುತಿತ್ತು. ಆ ಸೂರ್ಯನ ಬೆಳಕಿಗಾಗಿ ಹೇಗೆ ಪ್ರಾಣಿ, ಪಕ್ಷಿ, ಭೂಮಂಡಲದ ಸಕಲ ಚರಾಚರ ವಸ್ತುಗಳು ಕಾಯುತ್ತಿದ್ದವೋ, ಹಾಗೆಯೇ ಇಲ್ಲಿ ಈ ಒಂದು ಜೀವಕ್ಕಾಗಿ ಇವರೆಲ್ಲಾ ಹವಣಿಸುತ್ತಿದ್ದರು. ಇದನ್ನೆಲ್ಲಾ ಕಂಡ ದೇವರಿಗೂ ಏನನ್ನಿಸಿತ್ತೋ ಯೇನೊ? ಒಂದು ಜೀವಕ್ಕಾಗಿ ಅದೆಷ್ಟು ಜನ ಹವಣಿಸುತ್ತಿದ್ದಾರೆ ಎಂದು ಕಂಡ ಅವನ ಹೃದಯವೂ ಸ್ವಲ್ಪ ಕರಗಿತೇನೋ?

ಅಷ್ಟೊತ್ತಿಗೆ ಡಾಕ್ಟರು, ಅದೇನೋ ಸಣ್ಣ ಕ್ಲಿಪ್ಪಿನಂತಹಾ ಮೆಶೀನನ್ನು ತೆಗೆದು, ಮಗುವಿನ ಬಾಯಲ್ಲಿ ಇಟ್ಟು ಸಣ್ಣಗೆ ಒತ್ತಿದರು. ಭಯದ ನೆರಳಿನಲಿ, ಆತಂಕದ ಮಡುವಿನಲಿ ಶಾಂತವಾಗಿದ್ದ ಮನೆಯ ಮೂಲೆ ಮೂಲೆಗೂ ಕೇಳುವಂತೆ ಮಗುವಿನ ಅಳುವಿನ ಸದ್ದು ಮೊಳಗಲಾರಂಭಿಸಿತು. ಮೈಯ ಬಣ್ಣ ನಿಧಾನವಾಗಿ ಮಾಮೂಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ಡಾಕ್ಟರು, ರಾಜಮ್ಮ ಹಾಗೂ ಮುತ್ತಮ್ಮರ ಮನಸಲ್ಲಿ ಏನೋ ಸಾಧಿಸಿದ ಭಾವ. ವಿಠಲಣ್ಣ ಎಲ್ಲ ದೇವರಿಗೂ ಅಲ್ಲಿಂದಲೇ ಒಂದು ಧೀರ್ಗದಂಡ ನಮಸ್ಕಾರವನ್ನೂ ಮಾಡಿಯಾಗಿತ್ತು. ರಾಜಮ್ಮ ಮಗುವನ್ನು ಮತ್ತೊಮ್ಮೆ ತೊಳೆದು ಬಟ್ಟೆಯಲಿ ಸುತ್ತಿ, ರಾಘವೇಂದ್ರನ ಕೈನಲ್ಲಿ ಇಡುವ ಹೊತ್ತಿಗೆ ಮಗು ಹಿಡಿದಿಟ್ಟ ಉಸಿರು ಬಿಟ್ಟಿತ್ತು. ಇತ್ತ ರಾಘವೇಂದ್ರ ನಿಟ್ಟುಸಿರು ಬಿಟ್ಟಿದ್ದ.
(ಕಥೆಯ ಪಾತ್ರವರ್ಗ ಕೇವಲ ಕಾಲ್ಪನಿಕ ಹಾಗೂ ನಿಜಜೀವನಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಇದ್ದರೂ ಅದು ಕಾಕತಾಳೀಯವಷ್ಟೇ)

Amezin heart teaching story ....nice story k.p karanth ....keep it up
ReplyDeleteTnk u 😊
Delete